Sunday, January 19, 2025
Homeಟಾಪ್ ನ್ಯೂಸ್ಮನೆ, ಸಾಲ, ಭತ್ಯೆ.. : ಜನಾರ್ದನ ರೆಡ್ಡಿ ಪಕ್ಷದ ಭರ್ಜರಿ ಪ್ರಣಾಳಿಕೆ

ಮನೆ, ಸಾಲ, ಭತ್ಯೆ.. : ಜನಾರ್ದನ ರೆಡ್ಡಿ ಪಕ್ಷದ ಭರ್ಜರಿ ಪ್ರಣಾಳಿಕೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಹಾಗೂ ಪ್ರಣಾಳಿಕೆಯನ್ನು ಸೋಮವಾರ ಜನಾರ್ಧನ ರೆಡ್ಡಿ ಬಿಡುಗಡೆಗೊಳಿಸಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ಭರ್ಜರಿ ಆಶ್ವಾಸನೆಗಳನ್ನು ನೀಡಿದ್ದಾರೆ.


ಸ್ವಸಹಾಯ ಗುಂಪುಗಳಿಗೆ ಶೂನ್ಯಬಡ್ಡಿದರದಲ್ಲಿ 10 ಲಕ್ಷ ರೂ. ಗಳವರೆಗೆ ಸಾಲ ನೀಡುವುದಾಗಿ ಘೋಷಿಸಿರುವ ಜನಾರ್ಧನ ರೆಡ್ಡಿ, ತಾವು ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಮಾಸಿಕ 2,500 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಐದು ಎಕರೆಗಿಂತ ಕಡಿಮೆ ಭೂಮಿಯಿರುವ ಸಣ್ಣ ಮಟ್ಟದ ಕೃಷಿಕರಿಗೆ ವಾರ್ಷಿಕ 5 ಸಾವಿರ ರೂ. ಆರ್ಥಿಕ ನೆರವು, ಪ್ರತಿಮನೆಗೂ 250 ಯೂನಿಟ್ ಉಚಿತ ವಿದ್ಯುತ್ ಜನಾರ್ಧನ ರೆಡ್ಡಿ ಘೋಷಣೆಗಳಾಗಿವೆ.


ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ವೇತನ 1000 ರೂ. ಹೆಚ್ಚಳ, ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ, ವಸತಿ ರಹಿತ ಕುಟುಂಬಗಳ ಹೆಣ್ಣುಮಕ್ಕಳಿಗೆ ಎರಡು ಕೊಠಡಿಯುಳ್ಳ ಮನೆ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಶುಲ್ಕ ಪಾವತಿ ರದ್ದು ಜನಾರ್ಧನ ರೆಡ್ಡಿಯವರ ಪಕ್ಷದ ಪ್ರಮುಖ ಘೋಷಣೆಗಳಾಗಿವೆ.


ತಾವು ಯಾವುದೇ ಪಕ್ಷದೊಡನೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ನುಡಿದಿರುವ ಜನಾರ್ಧನ ರೆಡ್ಡಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದೊಡನೆ ತಮ್ಮ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!