Thursday, March 27, 2025
Homeಆಧ್ಯಾತ್ಮಹನುಮಜಯಂತಿ ಸಂಭ್ರಮ –ಗಾಳಿ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ಹನುಮಜಯಂತಿ ಸಂಭ್ರಮ –ಗಾಳಿ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಹನುಮಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತಿದೆ. ಗುರುವಾರ ಪ್ರಸಿದ್ಧ ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಗಿನಿಂದಲೇ ಭಕ್ತಾದಿಗಳ ಸಾಲು ಪ್ರಾರಂಭವಾಗಿದೆ. ಸುಮಾರು 600 ವರ್ಷಗಳ ಪುರಾತನ ದೇಗುಲ ಇದಾಗಿದ್ದು, ಭಕ್ತ ಕನಕದಾಸರ ಗುರುಗಳಾದ ಶ್ರೀ ವ್ಯಾಸರಾಯರು ನಿರ್ಮಿಸಿದ ದೇಗುಲವಿದು ಎಂಬ ಪ್ರತೀತಿಯಿದೆ.

ಹೆಚ್ಚಿನ ಸುದ್ದಿ

error: Content is protected !!