ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆಗೆ ತೊಡಗಿದ್ದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (fSSAI) ತೀವ್ರ ಮುಖಭಂಗವಾಗಿದೆ. ಕನ್ನಡಿಗರೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ಹಿಂಪಡೆದಿದೆ.
ಕಳೆದ ಜ.11 ರಂದು ಎಫ್‍ಎಸ್‍ಎಸ್‍ಎಐ ತನ್ನ ಮಾನದಂಡಗಳ ಮೂಲಕ ಹುಳಿಬರಿಸಿದ ಹಾಲಿನ ಉತ್ಪನ್ನಗಳ ಮೇಲೆ “ದಹಿ” ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಆದೇಶ ಹೊರಡಿಸಿತ್ತು. ನಂದಿನಿ ಹಾಲು ಮಂಡಳಿಯ ಉತ್ಪನ್ನವಾದ ಪ್ರೊ ಬಯೋಟಿಕ್ ಕರ್ಡ್ ಪೊಟ್ಟಣದ ಮೇಲೆ “ದಹಿ” ಎಂದು ಕನ್ನಡ ಲಿಪಿಯಲ್ಲಿ ಮುದ್ರಿಸಲಾಗಿತ್ತು. ಇದರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿದ್ದರೆ, ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು ಬರೆದಿದ್ದರು. ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು.
ಹೀಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಫ್‍ಎಸ್‍ಎಐ ತನ್ನ ಮಾರ್ಗಸೂಚಿಯನ್ನು ಪರಿಷ್ಕರಿಸಿದೆ.