ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ಬರೆಯ ನಡುವೆ ರಾಜಧಾನಿ ಬೆಂಗಳೂರಿನ ನಗರವಾಸಿಗಳಿಗೆ BBMP ಮತ್ತೊಂದು ಬರೆ ಎಳೆದಿದೆ.ಇನ್ಮುಂದೆ ಬೆಂಗಳೂರಿನಲ್ಲಿ ಕಸ ವಿಲೇವಾರಿಗೂ ಸೇವಾ ಶುಲ್ಕ ಪಾವತಿಸಬೇಕು ಎಂಬ ನಿಯಮವನ್ನು BBMP ಜಾರಿಗೆ ತರಲು ಮುಂದಾಗಿದೆ.
ಹೌದು,ಇದೇ ಏಪ್ರಿಲ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಸ್ವತಃ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು, ಇದು ತೆರಿಗೆ ಅಲ್ಲ ಬದಲಾಗಿ ಸರ್ವಿಸ್ ಚಾರ್ಜ್ ಎಂದಿದ್ದಾರೆ.
ಈ ಸರ್ವಿಸ್ ಚಾರ್ಜ್ ಅನ್ನು ಸಾರ್ವಜನಿಕರು ತಮ್ಮ ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ಹೇಳಿದ್ದಾರೆ. ಕಸದ ವಿಲೇವಾರಿಯ ಸರ್ವಿಸ್ ಚಾರ್ಜ್ ಅನ್ನು ವಿದ್ಯುತ್ ಬಿಲ್ ರೀತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಆಗಲ್ಲ. ಹೀಗಾಗಿ ಸರ್ವಿಸ್ ಚಾರ್ಜ್ ಹಾಕಲಾಗುತ್ತದೆ ಎಂದು ಹೇಳುದ್ದಾರೆ.