Wednesday, August 19, 2026
Homeಟಾಪ್ ನ್ಯೂಸ್TRANSFER: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ - ಜಾಫರ್ ಬೆಂಗಳೂರು ಮೆಟ್ರೊ ನೂತನ ಎಂಡಿ

TRANSFER: ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ – ಜಾಫರ್ ಬೆಂಗಳೂರು ಮೆಟ್ರೊ ನೂತನ ಎಂಡಿ

ಬೆಂಗಳೂರು: ಕರ್ನಾಟಕ ಸರ್ಕಾರವು (Karnataka Govt) ನಾಲ್ವರು ಐಎಎಸ್ ಅಧಿಕಾರಿಗಳನ್ನು (IAS Officer) ವಿವಿಧ ಇಲಾಖೆಗಳಿಗೆ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆಯ ಭಾಗವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (BMRCL) ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲಾಗಿದೆ.

ಹಣಕಾಸು ಇಲಾಖೆಯ ಆಯವ್ಯಯ ಹಾಗೂ ಸಂಪನ್ಮೂಲ ಕಾರ್ಯದರ್ಶಿಯಾಗಿದ್ದ ಡಾ. ಪಿ.ಸಿ. ಜಾಫರ್ ಅವರನ್ನು ಬಿಎಂಆರ್‌ಸಿಎಲ್‌ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ವರ್ಗಾಯಿಸಲಾಗಿದೆ. ಇಲ್ಲಿಯವರೆಗೆ ಎಂಡಿಯಾಗಿದ್ದ ಡಾ. ಜೆ. ರವಿಶಂಕರ್ ಅವರಿಗೆ ಸದ್ಯಕ್ಕೆ ಯಾವುದೇ ಹೊಸ ಹುದ್ದೆಯನ್ನು ತೋರಿಸಲಾಗಿಲ್ಲ.

ಇನ್ನುಳಿದಂತೆ, ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ. ಎಂ.ಟಿ. ರೇಜು ಅವರನ್ನು ಹಣಕಾಸು ಇಲಾಖೆಯ ಆಯವ್ಯಯ ಹಾಗೂ ಸಂಪನ್ಮೂಲ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಹಾಗೆಯೇ, ಹುದ್ದೆ ನಿರೀಕ್ಷೆಯಲ್ಲಿದ್ದ ಮತ್ತೊಬ್ಬ ಅಧಿಕಾರಿಯಾದ ಟಿ.ಎಚ್.ಎಂ. ಕುಮಾರ್ ಅವರನ್ನು ವಸತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ವಸತಿ ಇಲಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿದ್ದ ಕೆ.ಪಿ. ಮೋಹನರಾಜ್‌ ಅವರು ಇದರಿಂದ ಮುಕ್ತರಾಗಿದ್ದಾರೆ.

ಇದನ್ನೂ ಓದಿ : ರೇಟ್ ಫಿಕ್ಸ್ ಮಾಡಿ ಸೀಟ್ ಅಲಾಟ್, ರಾಜ್ಯದ ಅಭಿವೃದ್ಧಿಗಲ್ಲ – ಸಂಪುಟ ವಿಸ್ತರಣೆ ಬಗ್ಗೆ ಬಿವೈವಿ ಟೀಕೆ!

ಹೆಚ್ಚಿನ ಸುದ್ದಿ

Change Language »
error: Content is protected !!