Tuesday, December 3, 2024
Homeಟಾಪ್ ನ್ಯೂಸ್ಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ಇಮ್ರಾನ್ ಖಾನ್

ಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್, ಜಾಮೀನು ಪಡೆಯಲು ಬಯಸಿದರೆ‌ ಇಮ್ರಾನ್‌ ಖಾನ್ ವಿಚಾರಣೆಗೆ ಹಾಜರಾಗುವುದು ಕಡ್ಡಾಯ ಎಂದು ನ್ಯಾಯಾಧೀಶರು ಆದೇಶಿಸಿದೆ. ಈ ಹಿನ್ನಲೆ ಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಏಪ್ರಿಲ್ 4 ರಂದು‌ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮೂರು ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದೆ. ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವ ಮೂರು ಭಯೋತ್ಪಾದನಾ ಪ್ರಕರಣಗಳಲ್ಲಿ ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಲಾಗಿದೆ.

ಜಾಮೀನು ಪಡೆಯಲು ಬಯಸಿದರೆ‌ ಇಮ್ರಾನ್‌ ಖಾನ್ ವಿಚಾರಣೆಗೆ ಹಾಜರಾಗುವುದು ಕಡ್ಡಾಯ ಎಂದು ನ್ಯಾಯಾಧೀಶರು ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಭಾರೀ ಭದ್ರತೆಯಲ್ಲಿಆಗಮಿಸಿದ್ದರು. ಹಲವಾರು ಸಿಬ್ಬಂದಿಗಳು ಇಮ್ರಾನ್ ಖಾನ್ ಅವರನ್ನು ರಕ್ಷಿಸಲು ಬೃಹತ್ ಪಾಲಿಕಾರ್ಬೊನೇಟ್ ಹಾಳೆಗಳನ್ನು ಹಿಡಿದಿದ್ದರು. ಜತೆಗೆ‌ ಇಮ್ರಾನ್‌ ಖಾನ್‌ ಅವರ ತಲೆಯನ್ನು ಬುಲೆಟ್ ಪ್ರೂಫ್ ಬಕೆಟ್ ನಿಂದ ಮುಚ್ಚಲಾಗಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಹೆಚ್ಚಿನ ಸುದ್ದಿ

error: Content is protected !!