ಬೆಂಗಳೂರು: ʼಡ್ಯಾಡಿ ಈಸ್ ಹೋಮ್’ ಜೆಡಿಎಸ್‌ನವರ (JDS) ಎಐ ಟೀಸರ್ (AI Teaser) ರಿಲೀಸ್ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಡ್ಯಾಡಿ? ಡ್ಯಾಡಿ ಈಸ್ ಹೋಮ್ ಅಂದ್ರೆ ಏನು? ಎಂದು ವ್ಯಂಗ್ಯವಾಡಿದ್ದಾರೆ. ಅವರು ಮೊದಲು ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟ ಮೇಲೆ ಮಾತು ಕೊಟ್ಟು ರಾಜ್ಯಕ್ಕೆ ಬರಲಿ. ಅವರನ್ನ ಯಾಕೆ ರಾಜ್ಯಕ್ಕೆ ಕರೆದುಕೊಂಡು ಬರ್ತಾ ಇದ್ದೀರಾ? ಈಗ ದೇಶದಲ್ಲಿ ಇದ್ದಾರೆ, ದೇಶಸೇವೆ ಮಾಡಲಿ ಎಂದು ಟಕ್ಕರ್ ಕೊಟ್ಟಿದ್ದಾರೆ.
ಜೆಡಿಎಸ್‌ನವರಿಗೆ ಕೆಲಸ ಇಲ್ಲ, ಸಿಡಿ ಫ್ಯಾಕ್ಟರಿ ಇದ್ದಿದ್ದು ಹೊಳೆನರಸೀಪುರದಲ್ಲಿ, ಪದ್ಮನಾಭ ನಗರದಲ್ಲಿ. ಆ ಫ್ಯಾಕ್ಟರಿಯಲ್ಲಿ ಯಾರು ಮ್ಯಾನಿಫ್ಯಾಕ್ಚರ್ ಮಾಡ್ತಿದ್ದು? ಕುಮಾರಸ್ವಾಮಿ ಇದನ್ನೆಲ್ಲಾ ಬಿಡಿ. ದಯವಿಟ್ಟು ಹೆಚ್‌ಎಂಟಿಯವರಿಗೆ ನ್ಯಾಯ ಕೊಡಿಸಿ. ಸುಮ್ಮನೆ ಇಲ್ಲದೇ ಇರೋದನ್ನ ಯಾಕೆ ಹೇಳ್ತೀರಿ. ಮಂಡ್ಯದಲ್ಲಿ ಗಣಿಗ ರವಿ ಸರ್ಕಾರದ ಜಾಗ ಗುರುತಿಸಿದ್ದಾರೆ. ನಿಮ್ಮ ಇಲಾಖೆಯಿಂದ ಏನ್ ಮಾಡಿದ್ದೀರಿ ಹೇಳಿ. ಉದ್ಯೋಗ ಕೊಡಿಸೋದನ್ನ ನೋಡಿ ಅಂತಾ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ಎಂಟ್ರಿ..?: 2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ ಹಲವು ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿ ಶುರು ಮಾಡಿದ್ದಾರೆ. ಈ ನಡುವೆ ಹೆಚ್.ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕೀಯಕ್ಕೆ ವಾಪಸ್ ಆಗ್ತಾರೆ ಅನ್ನೋ ದೊಡ್ಡ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ಕೇಂದ್ರ ಮಾಡಿದ್ದನ್ನೆಲ್ಲಾ ಬಿಜೆಪಿಯವರು ಸಮರ್ಥಿಸಿಕೊಳ್ಳುವುದು ಮಹಾ ಅಪರಾಧ: ಸಿಎಂ
ಹೌದು.. ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಜೆಡಿಎಸ್, ಬಿಜೆಪಿಯೊಂದಿಗೆ ವೀಲಿನವಾಗಲಿದೆ. ಕರ್ನಾಟಕದಲ್ಲಿ 2 ಪಕ್ಷಗಳು ಮಾತ್ರ ಇರಲಿದೆ ಎಂಬ ಮಾತುಗಳನ್ನಾಡಿದ್ದರು. ಈ ಬೆನ್ನಲ್ಲೇ ಆಕ್ಟಿವ್ ಆಗ್ತಿರುವ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.
2028 ರ ಮಹಾಕದನಕ್ಕೆ ದೆಹಲಿ ಮಟ್ಟದಲ್ಲೇ ರಣತಂತ್ರ ರೂಪಿಸಲಾಗ್ತಿದ್ದು, ಹೆಚ್‌ಡಿಕೆ ಎಂಟ್ರಿಗೆ ಹೈಕಮಾಂಡ್ ಕೂಡ ಒಪ್ಪಿಗೆ ಸೂಚಿಸಿದೆ ಎನ್ನುತ್ತಿವೆ ಪಕ್ಷದ ಆಪ್ತ ಮೂಲಗಳು. ಇದಕ್ಕೆ ಅಭಿಮಾನಿಗಳು ರಿಲೀಸ್ ಮಾಡಿರುವ ಎಐ ವಿಡಿಯೋ ಪುಷ್ಟಿ ನೀಡಿದಂತಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಟೀಸರ್ ಮಾದರಿಯಲ್ಲೇ ಹೆಚ್‌ಡಿಕೆ ಕುರಿತು ಅಭಿಮಾನಿಗಳು ‘ಡ್ಯಾಡಿ ಈಸ್ ಹೋಮ್’ ಎಐ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣ ಎಂಟ್ರಿಯ ಸುಳಿವು ಕೊಡುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.