ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು (Congress Workers) ಹಲ್ಲೆ (Crime) ನಡೆಸಿದ್ದು, ಇದನ್ನು ಖಂಡಿಸಿ ಬಿಜೆಪಿ (BJP) ಕಾರ್ಯಕರ್ತರು ರಾತ್ರೋ ರಾತ್ರಿ ಕಡೂರು ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯ ಸಂದೇಶ್ ಕುಮಾರ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಕಡೂರು ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರು ಓವರ್‌ಟೇಕ್ ವಿಚಾರವಾಗಿ ಪ್ರಕಾಶ್ ಅವರ ಅಳಿಯ ಸಂದೇಶ್ ಕುಮಾರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ನಡುವೆ ಕಿರಿಕ್ ಆಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಗಲಾಟೆ ವೇಳೆ ಆರೋಪಿ ಸಂತೋಷ್ ಹಾಗೂ ಆತನ ಸಂಗಡಿಗರು ಸಂದೇಶ್ ಮೇಲೆ ಹಲ್ಲೆ ನಡೆಸಿದ್ದು, ರಾತ್ರೋರಾತ್ರಿ ಆರೋಪಿಗಳನ್ನು ಬಂಧಿಸುವಂತೆ ಕಡೂರು ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಹಲ್ಲೆ ವಿಚಾರ ತಿಳಿಯುತ್ತಿದ್ದಂತೆ ಕಡೂರು ಪೊಲೀಸ್ ಠಾಣೆಯ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದ್ದು, 24 ಗಂಟೆಗಳಲ್ಲಿ ಹಲ್ಲೆ ಮಾಡಿದವರ ಬಂಧನ ಮಾಡುವುದಾಗಿ ಎಸ್ಪಿ ತಿಳಿಸಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಇದನ್ನೂ ಓದಿ : ಮೇಕೆ ವಿಚಾರಕ್ಕೆ ತಂದೆಗೆ ಗಾಯ ಮಾಡಿ ನದಿಗೆ ತಳ್ಳಿದ ಪಾಪಿ ಮಗನ ಬಂಧನ!
ಹಳೆ ವೈಷಮ್ಯದ ಹಿನ್ನೆಲೆ – ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ!
ನೆಲಮಂಗಲದ ಇಸ್ಲಾಂಪುರದಲ್ಲಿ ಮುಸ್ಲಿಂ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಹಳೆ ವೈಷಮ್ಯದ ಹಿನ್ನಲೆ ದಾಳಿ ನಡೆಸಲಾಗಿದೆ ಎಂದು ತನಿಖೆ ವೇಳೆ ಬಯಲಾಗಿದೆ.
ಇಸ್ಲಾಂಪುರದಲ್ಲಿ ಗ್ರಾ.ಪಂ. ಸದಸ್ಯ ಸಲೀಂ ಪಾಷಾ ಎಂಬುವವರು ಮಟನ್ ಅಂಗಡಿಯಲ್ಲಿ ಕೂತಿದ್ದಾಗ ಅಪರಿಚಿತ ವ್ಯಕ್ತಿಗಳು ಆಗಮಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸಲೀಂ ಅವರ ತೋಳಿನ ಕೆಳಗೆ ಗಾಯ ಆಗಿದೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿಯ ವಿಷಯ ತಿಳಿದಾಗ ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಗ್ರಾಮಸ್ಥರು ಜಮಾಯಿಸಿದ್ದಾರೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರಿ ದಾಖಲಾಗಿದೆ.
ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನ ಹಿಡಿಯುತ್ತೇವೆ ಎಂದು ಎಸ್ ಪಿ ಸಿ. ಕೆ. ಬಾಬಾ ತಿಳಿಸಿದ್ದಾರೆ.
2021ರಲ್ಲಿ ಇದೇ ವ್ಯಕ್ತಿ ಮೇಲೆ ಅಟ್ಯಾಕ್ ಮಾಡಿಸಿದ್ದವರೇ ಮಾಡಿಸಿರೋ ಆರೋಪ ಕೇಳಿ ಬರುತ್ತಿದೆ. ಪರಿಶೀಲನೆ ಮಾಡಿ ತನಿಖೆ ಮಾಡುತ್ತೇವೆ. ಈ ಸಂಬಂಧ ನೆಲಮಂಗಲ ಗ್ರಾ. ಠಾಣೆಯಲ್ಲಿ ಕೊಲೆಯತ್ನ, ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದೆ ಎಂದು ಎಸ್ ಪಿ ಸಿ. ಕೆ. ಬಾಬಾ ತಿಳಿಸಿದ್ದಾರೆ.