Wednesday, March 11, 2026
Homeಟಾಪ್ ನ್ಯೂಸ್ಫೋರ್ಬ್ಸ್ ಪಟ್ಟಿ: ಅಂಬಾನಿಗೆ 9ನೇ ಸ್ಥಾನ, ಏಷ್ಯಾದಲ್ಲಿಯೇ ನಂ.1 ಶ್ರೀಮಂತರು

ಫೋರ್ಬ್ಸ್ ಪಟ್ಟಿ: ಅಂಬಾನಿಗೆ 9ನೇ ಸ್ಥಾನ, ಏಷ್ಯಾದಲ್ಲಿಯೇ ನಂ.1 ಶ್ರೀಮಂತರು

ನವದೆಹಲಿ: 2023ನೇ ಸಾಲಿನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದು ಫೋರ್ಬ್ಸ್ 37ನೇ ವಾರ್ಷಿಕ ಪಟ್ಟಿಯಾಗಿದ್ದು, ಅದರಲ್ಲಿ ಭಾರತದ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಟಾಪ್ 9ನೇ ಸ್ಥಾನ ಪಡೆದಿದ್ದಾರೆ.

ಅದಾನಿ ಗ್ರೂಪ್ ನ ಗೌತಮ್ ಅದಾನಿ ಅವರು 24ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ವಿಶ್ವದಲ್ಲಿಯೇ 2ನೇ ಧನಿಕರಾಗಿದ್ದ ಇವರು ಅಮೆರಿಕದ ಹಿಂಡನ್ಬರ್ಗ್ ಸಂಸ್ಥೆಯ ಆರೋಪಿತ ವರದಿಯ ಬಳಿಕ ಅದಾನಿ ಗ್ರೂಪ್ ಮೌಲ್ಯ ತೀವ್ರ ಕುಸಿತ ಕಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ವಿಶ್ವದ ಟಾಪ್ 10ರೊಳಗೆ ಸ್ಥಾನ ಪಡೆಯುವುದರ ಜೊತೆಗೆ ಏಷ್ಯಾದಲ್ಲಿಯೇ ನಂಬರ್ 1 ಶ್ರೀಮಂತ ವ್ಯಕ್ತಿ ಪಟ್ಟವನ್ನು ಉಳಿಸಿಕೊಂಡರು. ಅಂಬಾನಿ ಅಂದಾಜು ನಿವ್ವಳ ಮೌಲ್ಯ 83.4 ಬಿಲಿಯನ್ ಡಾಲರ್ ಆಗಿದೆ.

ಅಂಬಾನಿ ಕಳೆದ ವರ್ಷ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದರು. ಅಜಮಾಸು 90.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದರು. ಈ ವರ್ಷ ಮೌಲ್ಯದಲ್ಲಿ ಇಳಿಕೆ ಕಂಡರೂ ಟಾಪ್ 9 ನೇ ಸ್ಥಾನ ಪಡೆದಿದ್ದಾರೆ. ವಿಶ್ವ ಶ್ರೀಮಂತರ ಆದಾಯವೂ ಇಳಿಕೆಯಾಗಿದ್ದು, ಇದಕ್ಕೆ ಕಾರಣವಾಗಿದೆ. ಇದಲ್ಲದೇ, ಮೈಕ್ರೋಸಾಫ್ಟ್‌ನ ಸ್ಟೀವ್ ಬಾಲ್ಮರ್, ಲ್ಯಾರಿ ಪೇಜ್ ಮತ್ತು ಗೂಗಲ್‌ನ ಸೆರ್ಗೆ ಬ್ರಿನ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್, ಡೆಲ್ ಟೆಕ್ನಾಲಜಿಸ್ ನ ಮೈಕೆಲ್ ಡೆಲ್ ಅವರಿಗಿಂತ ಅಂಬಾನಿ ಉನ್ನತ ಸ್ಥಾನದಲ್ಲಿದ್ದಾರೆ.

ಸಿರಿವಂತರ ಸಂಖ್ಯೆ ಕುಸಿತ:

ಫೋರ್ಬ್ಸ್‌ನ ಜಾಗತಿಕ ಬಿಲಿಯನೇರ್ ಗಳ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಕುಸಿತ ಕಂಡಿದೆ. ಕಳೆದ ಸಲ ಇದ್ದ 2,668 ಜನರನ್ನು ಸಿರಿವಂತರು ಎಂದು ಪಟ್ಟಿ ಮಾಡಲಾಗಿತ್ತು. ಈ ಬಾರಿ ಅದು 2,640ಕ್ಕೆ ಇಳಿಕೆಯಾಗಿದೆ. ಭಾರತದ ಸಿರಿವಂತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2022ರಲ್ಲಿ 166 ಜನರಿದ್ದ ಶ್ರೀಮಂತರು ಈ ಬಾರಿ 169ರಷ್ಟಿದ್ದಾರೆ ಎಂದು ಫೋರ್ಬ್ಸ್‌ ಪಟ್ಟಿ ಮಾಡಿದೆ.

ಬರ್ನಾಲ್ಡ್ ಅರ್ನಾಲ್ಟ್ ವಿಶ್ವ ನಂ.1:

ಎಲ್ವಿಎಚ್ಎಂನ ಕಂಪನಿ ಮುಖ್ಯಸ್ಥ ಬರ್ನಾಲ್ಟ್ ಅರ್ನಾಲ್ಟ್ ವಿಶ್ವದ ನಂ.1 ಧನಿಕ ಎಂಬ ಪಟ್ಟವನ್ನು ಇದೇ ಮೊದಲ ಸಲ ಪಡೆದಿದ್ದಾರೆ. ಇವರು 211 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಟ್ವಿಟರ್ ಸಿಇಒ ಎಲಾನ್ ಮಸ್ಕ್ 50 ಪರ್ಸೆಂಟ್ ಆಸ್ತಿಯಲ್ಲಿ ಕುಸಿತ ಕಾಣುವ ಮೂಲಕ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರಲ್ಲಿ 44 ಬಿಲಿಯನ್ ಡಾಲರ್ ಆಸ್ತಿ ಇದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಮೂರನೇ ಸ್ಥಾನದಲ್ಲಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!