Thursday, July 16, 2026
Homeಟಾಪ್ ನ್ಯೂಸ್FOOTPATH CLEARANCE : ಗಾಡಿಗಳ ಜೊತೆ ದನಗಳನ್ನೂ ತೊಗೊಂಡುಹೋಗಿ! - ರಾಂಗ್‌ ಆದ ಎಂಎಲ್‌ಎ...

FOOTPATH CLEARANCE : ಗಾಡಿಗಳ ಜೊತೆ ದನಗಳನ್ನೂ ತೊಗೊಂಡುಹೋಗಿ! – ರಾಂಗ್‌ ಆದ ಎಂಎಲ್‌ಎ ರವಿಸುಬ್ರಹ್ಮಣ್ಯ! – VIDEO

ಬೆಂಗಳೂರು: ಬೆಂಗಳೂರಲ್ಲಿ (Bengaluru) ಸಾರ್ವಜನಿಕರ ತೆರಿಗೆ ಹಣದಿಂದ ಅತ್ಯಂತ ಸುವ್ಯವಸ್ಥಿತವಾಗಿ ಮತ್ತು ನೂತನ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ವೈಟ್ ಟಾಪಿಂಗ್ (White-topping) ರಸ್ತೆಗಳು ಇದೀಗ ಕೆಲವು ಬೇಜವಾಬ್ದಾರಿ ನಾಗರಿಕರಿಂದಾಗಿ ತನ್ನ ಅಂದವನ್ನು ಕಳೆದುಕೊಳ್ಳುತ್ತಿವೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು (Foot path ) ಇಂದು ಕಸದ ತೊಟ್ಟಿಗಳಾಗಿ ಮಾರ್ಪಡುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದೇ ವಿಚಾರಕ್ಕೆ ಶಾಸಕ ರವಿ ಸುಬ್ರಹ್ಮಣ್ಯ (Ravi Subrahmanya ) ಜನರಿಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ನಗರದ ಪ್ರಮುಖ ಭಾಗಗಳಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಈ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲೆ ನಾಗರಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಪಾದಚಾರಿಗಳು ಮುಕ್ತವಾಗಿ ಓಡಾಡಬೇಕಾದ ಜಾಗದಲ್ಲಿ ಕಸದ ರಾಶಿಗಳು ಬೀಳುತ್ತಿರುವುದರಿಂದ ಇಡೀ ರಸ್ತೆಯ ಸೌಂದರ್ಯ ಹಾಳಾಗುತ್ತಿದೆ. ಇದರೊಂದಿಗೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ದನಕರುಗಳನ್ನು ಕಟ್ಟುವುದು ಮತ್ತು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಮತ್ತು ಬಿಬಿಎಂಪಿ (BBMP) ಸಾರ್ವಜನಿಕರ ಆಸ್ತಿಯನ್ನು ಅಭಿವೃದ್ಧಿಪಡಿಸಲು ನಾಗರಿಕರ ಕಠಿಣ ಪರಿಶ್ರಮದ ತೆರಿಗೆ ಹಣವನ್ನು ಬಳಸುತ್ತದೆ. ಆದರೆ, ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಆಸ್ತಿಯನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿಯನ್ನು ಕೆಲವರು ಮರೆಯುತ್ತಿದ್ದಾರೆ. ಇಂತಹ ಅತಿಕ್ರಮಣಗಳಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ನಿರಂತರವಾಗಿ ಅಪಘಾತದ ಭೀತಿಯನ್ನು ಎದುರಿಸುವಂತಾಗಿದೆ.

ಈ ನಿಟ್ಟಿನಲ್ಲಿ ಕೇವಲ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಸಾಲದು, ನಾಗರಿಕರಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆ ಮೂಡುವುದು ಅತ್ಯಗತ್ಯವಾಗಿದೆ. ಇಂತಹ ಬೇಜವಾಬ್ದಾರಿ ಕೃತ್ಯಗಳ ವಿರುದ್ಧ ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಸ್ಥಳೀಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸಾರ್ವಜನಿಕ ಜಾಗವನ್ನು ಅತಿಕ್ರಮಿಸುವ ಹಾಗೂ ಕಸ ಎಸೆಯುವ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಠಿಣ ದಂಡ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : ಡೇ-ಕೇರ್‌ನಲ್ಲಿ ಮಕ್ಕಳ ಮೇಲಿನ ಹಲ್ಲೆ ಕೇಸ್: ಅಧಿಕೃತ ಸ್ಪಷ್ಟನೆ ನೀಡಿದ ಕ್ಯಾಪ್‌ಜೆಮಿನಿ ಸಂಸ್ಥೆ

ಹೆಚ್ಚಿನ ಸುದ್ದಿ

Change Language »
error: Content is protected !!