ನಮ್ಮಲ್ಲಿ ಈ ಬೆಳಗ್ಗೆ ತಿಂಡಿಗೆ ದೋಸೆ, ಇಡ್ಲಿ ಮಾಡಿದಾಗ ಸಾಂಬಾರ್ ಜೊತೆ ಚಟ್ನಿ ಮಸ್ಟ್ ಅನ್ನುವಷ್ಟರ ಮಟ್ಟಿಗೆ ಚಟ್ನಿ ಪ್ರಿಯರು ಇದ್ದಾರೆ. ಕೇವಲ ದೋಸೆ, ಇಡ್ಲಿಗೆ ಸೀಮಿತವಾಗದ ಈ ಚಟ್ನಿ ರೆಸಿಪಿ ಒಮ್ಮೊಮ್ಮೆ ಚಪಾತಿ-ರೊಟ್ಟಿಗೂ ಜೊತೆಯಾಗಲಿದ್ದು, ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಮಧ್ಯಾಹ್ನದ ಊಟ್ಟಕ್ಕೂ ನಾನು ಜೋಡಿಯಾಗಬಲ್ಲೆ ಎಂದು ಗುರುತಿಸಿಕೊಂಡಿದೆ. ಹೌದು ಕೆಲವರಿಗೆ ಈ ಬಿಸಿ ಬಿಸಿ ಅನ್ನಕ್ಕೆ ಚಟ್ನಿ ತುಪ್ಪ ಹಾಕೊಂಡು ತಿನ್ನೋದು ಬಹಳ ಇಷ್ಟವಾಗುತ್ತದೆ. ಎಷ್ಟೇ ಸಾಂಬಾರು, ಸಾರು ಇದ್ದರೂ ಒಮ್ಮೊಮ್ಮೆ ಚಟ್ನಿ ಒಂದಿದ್ದರೆ ಚೆನ್ನಾಗಿ ಇತ್ತು ಅನ್ನಿಸುತ್ತದೆ. ಅದು ಅಲ್ಲದೇ ಈ ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನಕ್ಕೆ ಚಟ್ನಿ ಹೇಳಿ ಮಾಡಿಸಿದ ಜೋಡಿಯಾಗಿದ್ದು, ನಾವಿಂದು ನಿಮಗೆ ಸಿಬ್ಬೆಹಣ್ಣಿನ ಚಟ್ನಿಯನ್ನು ಹೇಳಿಕೊಡುತ್ತಿದ್ದೇವೆ. ಯಾವಗಾಲೂ ಈ ತರಕಾರಿ ಹೆಚ್ಚಿಕೊಂಡು ಗಂಟೆಗಟ್ಟಲ್ಲೇ ಅಡುಗೆ ಮನೆಯಲ್ಲಿಯೇ ಕಳೆಯುವ ಬದಲು ವಾರಕ್ಕೆ ಎರಡು ಬಾರಿ ಈ ರೀತಿ ಚಟ್ನಿ ಮಾಡಿಕೊಂಡರೆ ನಿಮಗೂ ರೆಸ್ಟ್ ಸಿಕ್ಕಿದಂತಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು
ಪೇರಳೆ ಹಣ್ಣು
ಉಪ್ಪು
ಚಿಲ್ಲಿ ಫ್ಲೇಕ್ಸ್
ಶುಂಠಿ
ಬೆಳ್ಳುಳ್ಳಿ
ಈರುಳ್ಳಿ
ಜೀರಿಗೆ
ಸಾಸಿವೆ
ಅರಿಶಿನ ಪುಡಿ
ಹಿಂಗು
ಎಣ್ಣೆ
ನೀರು
ಮೆಂತ್ಯ
ಮಾಡುವ ವಿಧಾನ:
* ಮೊದಲಿಗೆ ಸೀಬೆಹಣ್ಣುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ಬೀಜಗಳನ್ನು ತೆಗೆದುಹಾಕಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಪ್ಯಾನ್‌ಗೆ ನೀರು ಹಾಕಿ, ಅದರಲ್ಲಿ ಸೀಬೆ ಹಣ್ಣಿನ ತುಂಡುಗಳನ್ನು ಬೇಯಿಸಿಕೊಳ್ಳಿ.
* ಈಗ ಇನ್ನೊಂದು ಪ್ಯಾನ್‌ನಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದು ತಣ್ಣಗಾಗಿಸಿ ನಂತರ ಒರಟಾಗಿ ಪುಡಿ ಮಾಡಿಕೊಳ್ಳಿ.
* ಚಿಲ್ಲಿ ಫ್ಲೇಕ್ಸ್ ಅನ್ನು ಸ್ವಲ್ಪ ಎಣ್ಣೆಯಲ್ಲಿ ಸುವಾಸನೆ ಬರುವ ತನಕ ಹುರಿದು, ನಂತರ ಅದೇ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
* ಈಗ ಈರುಳ್ಳಿ, ಬೆಳ್ಳುಳಿ, ಶುಂಠಿ ಮಿಶ್ರಣಕ್ಕೆ ಬೇಯಿಸಿದ ಪೇರಳೆಯನ್ನು ಸ್ಮ್ಯಾಶ್ ಮಾಡಿ ಸೇರಿಸಿ. ಅದಕ್ಕೆ ಮಸಾಲೆ ಮಿಶ್ರಣ ಮತ್ತು ಉಪ್ಪನ್ನು ಬೆರೆಸಿ ಕುದಿಸಿಕೊಂಡರೆ ರುಚಿಯಾದ ಚಟ್ನಿ ಸವಿಯಲು ಸಿದ್ಧ.