Wednesday, May 14, 2025
Homeಕ್ರೈಂFood poison: ರಸ್ತೆ ಬದಿ ಮೋಮೋಸ್ ತಿಂದು ಮಹಿಳೆ ಸಾವು - ಹಲವರು ಅಸ್ವಸ್ಥ!

Food poison: ರಸ್ತೆ ಬದಿ ಮೋಮೋಸ್ ತಿಂದು ಮಹಿಳೆ ಸಾವು – ಹಲವರು ಅಸ್ವಸ್ಥ!

ಹೈದ್ರಾಬಾದ್ : ಮುತ್ತಿನ ನಗರಿ ಹೈದ್ರಾಬಾದ್ ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.ರಸ್ತೆ ಬದಿ ಸಿಗುವ ಮೊಮೋಸ್ ತಿಂದು ಮಹಿಳೆ ಸಾವನಪ್ಪಿ, 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ಬೀದಿ ಬದಿ ಮಾರಾಟ ಮಾಡುವ ಆಹಾರಗಳ ಗುಣಮಟ್ಟ, ಸುರಕ್ಷತೆ ಬಗ್ಗೆ ಆತಂಕ ಇದ್ದೇ ಇದೆ. ಈ ಘಟನೆಯಿಂದ ಟೆನ್ಷನ್ ಆತಂಕ ಹೆಚ್ಚಿಸಿದೆ.

ಮೊಮೋಸ್ ತಿಂದು ರೇಶ್ಮಾ ಬೇಗಂ ಎಂಬ 33 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ. ಆಕೆಯನ್ನೇ ಅವಲಂಬಿಸಿದ್ದ 12 ಮತ್ತು 14 ವರ್ಷದ ಹೆಣ್ಣುಮಕ್ಕಳಿಬ್ಬರು ಅನಾಥರಾಗಿದ್ದಾರೆ. ಇದೇ ವ್ಯಾಪಾರಿ ಬಳಿ ಆಹಾರ ಖರೀದಿಸಿದ ಇನ್ನೂ ಸುಮಾರು 20 ಮಂದಿ ಅಸ್ವಸ್ಥರಾಗಿದ್ದಾರೆ.

ಬಂಜಾರಾ ಹಿಲ್ಸ್ ಪ್ರದೇಶದ ವಿಭಿನ್ನ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬ ಮೊಮೋಸ್ ಮಾರಾಟ ಮಾಡಿದ್ದನು. ಮೊಮೋಸ್ ಗೆ ಕಳಪೆ ಗುಣಮಟ್ಟದ ಆಹಾರ ಮಿಶ್ರಣ ಮಾಡಿರುವ ಸಾಧ್ಯತೆ ಇದೆ. ಇದ್ರಿಂದಾಗಿ ಫುಡ್ ಪಾಯ್ಸನಿಂಗ್ ಆಗಿದೆ ಎನ್ನಲಾಗುತ್ತಿದೆ.ಆಹಾರ ಮಾರಾಟಗಾರನ ಬಳಿ ಇದ್ದ ಮೊಮೋಸ್ ಮತ್ತು ಹಿಟ್ಟಿನ ಮಾದರಿಗಳನ್ನು ಪೊಲೀಸರು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದಾರೆ. ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!