ಗೃಹಿಣಿಯರಿಗೆ ಸಂಜೆಯ ಸ್ನ್ಯಾಕ್ಸ್ ಏನು ವಿಶೇಷವಾಗಿ ಮಾಡೋದು ಎಂಬ ಚಿಂತೆ ಯಾವಾಗಲೂ ಇದ್ದೇ ಇರುತ್ತದೆ. ಅಲ್ಲದೇ ಸಂಜೆಯ ಚಹಾದ ಜೊತೆಗೆ ಗರಿ ಗರಿಯಾಗಿ ಕರಿದ ತಿಂಡಿ ಇಲ್ಲದಿದ್ದರೆ ಟೀ-ಕಾಫಿ ಗಂಟಲಲ್ಲಿ ಇಳಿಯದೇ ಇಲ್ಲ. ಅಂತಹವರಿಗಾಗಿ ನಾವಿಂದು ಕ್ಯಾಬೇಜ್ ರೋಸ್ಟ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಸಿಂಪಲ್ ಆಗಿರೋ ಈ ರೆಸಿಪಿ ತುಂಬಾ ಟೇಸ್ಟಿಯೂ ಆಗಿದೆ. ಸಾಮಾನ್ಯ ಪನೀರ್ ರೋಸ್ಟ್ , ಮಶ್ರೂಮ್ ರೋಸ್ಟ್, ಬೇಬಿ ಕಾರ್ನ್ ರೋಸ್ಟ್ ಅನ್ನು ನೀವು ಸವಿದಿರುತ್ತೀರಿ. ಆದ್ರೆ ಇದಕ್ಕೆ ಸ್ವಲ್ಪ ಟ್ವಿಸ್ಟ್ ನೀಡಿ ಕ್ಯಾಬೇಜ್ ಸೇರಿಸಿ ರೋಸ್ಟ್ ಮಾಡಿ ಸವಿಯಿರಿ… ನೀವಿದನ್ನು ಕೇವಲ 5ರಿಂದ 10 ನಿಮಿಷಗಳಲ್ಲಿ ತಯಾರಿಸಬಹುದಾಗಿದ್ದು, ಈ ರೆಸಿಪಿಯನ್ನೊಮ್ಮೆ ಖಂಡಿತಾ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು…
- ಎಲೆಕೋಸು (ಕ್ಯಾಬೇಜ್) – 1
- ಎಣ್ಣೆ – 2 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕಾಳು ಮೆಣಸಿನ ಪುಡಿ – ಅರ್ಧ ಚಮಚ
- ಬೆಳ್ಳುಳ್ಳಿ ಪುಡಿ – ಕಾಲು ಚಮಚ
- ನಿಂಬೆ ರಸ – 2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ…
- ಕ್ಯಾಬೇಜ್ ಚೆನ್ನಾಗಿ ಸ್ವಚ್ಛಗೊಳಿಸಿ, ಸಣ್ಣ ಸಣ್ಣ ಭಾಗಗಳಾಗಿ ಕತ್ತರಿಸಿಕೊಳ್ಳಿ.
- ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಕ್ಯಾಬೇಜ್ ತುಂಡುಗಳನ್ನು ಪ್ಯಾನ್ ಮೇಲೆ ಜೋಡಿಸಿ, ಅದಕ್ಕೆ 2 ಟೀಸ್ಪೂನ್ ಎಣ್ಣೆಯನ್ನು ಹಚ್ಚಿ.
- ನಂತರ ಉಪ್ಪು, ಕಾಳು ಪುಡಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಅದರ ಮೇಲೆ ಹಾಕಿ. ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ.
- ಕ್ಯಾಬೇಜ್ ಮೃದು ಹಾಗೂ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಅದನ್ನು ಪ್ಯಾನ್ ಯಿಂದ ತೆಗೆಯಿರಿ.
ಈಗ ಅದರ ಮೇಲೆ ನಿಂಬೆ ರಸವನ್ನು ಚಿಮುಕಿಸಿ, ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕ್ಯಾಬೇಜ್ ರೋಸ್ಟ್ ಸವಿಯಲು ಸಿದ್ಧ.