ಅಕಾಲಿಕ ಮಳೆಯ ಹೊಡೆತಕ್ಕೆ ಬೆಂಗಳೂರು ವಿಮಾನ ನಿಲ್ದಾಣ ಅಕ್ಷರಶಃ ಬೆಚ್ಚಿಬಿದ್ದಿದೆ. ಸೋಮವಾರ ರಾತ್ರಿ ಹಾಗೂ ಮಂಗಳವಾರ ಸುರಿದ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಆರು ವಿಮಾನಗಳು ತಡವಾಗಿ ಹೊರಟಿದ್ದರೆ, 14 ವಿಮಾನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.
ಮಂಗಳವಾರ ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಹಠಾತ್ತಾಗಿ ಬಂದ ಭಾರೀ ಮಳೆಗೆ ವಿಮಾನ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬೆಂಗಳೂರು ಮಾರ್ಗವಾಗಿ ಸಂಚರಿಸಬೇಕಿದ್ದ ವಿಮಾನಗಳನ್ನು ಚೆನ್ನೈ, ಹೈದರಾಬಾದ್, ಕೊಯಂಬತ್ತೂರ್ ಸೇರಿದಂತೆ ಹಲವೆಡೆಗೆ ಮಾರ್ಗ ಬದಲಾವಣೆ ಮಾಡಲಾಯಿತು. ಸುಮಾರು ಆರು ವಿಮಾನಗಳ ಹೊರಡುವ ವೇಳಾಪಟ್ಟಿಯಲ್ಲಿ ವ್ಯತ್ಯವಾಗಿದ್ದು, ಒಂದು ತಾಸಿನ ಬಳಿಕ ವಿಮಾನನಿಲ್ದಾಣದ ವ್ಯವಸ್ಥೆ ಸಹಜಸ್ಥಿತಿಗೆ ಬಂದಿದೆ.