ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಎಕ್ಸಾಂ ಶುರುವಾಯ್ತು. ಮೊದಲನೇ ದಿನದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಲೆ ಮೇಲಿಂದ ಕೊಂಚ ಭಾರವನ್ನು ಇಳಿಸಿಕೊಂಡಿದ್ದಾರೆ. ಮೊದಲನೆ ದಿನದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಹುಮ್ಮಸ್ಸು ಜೋರಾಗಿತ್ತು
2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಇಂದು ಮೊದಲನೇ ದಿನ. ಇಂದು ಕನ್ನಡ ಹಾಗು ಅರೇಬಿಕ್ ಭಾಷೆಯ ಪರೀಕ್ಷೆಯನ್ನ ಯಾವುದೇ ಗೊಂದಲವಿಲ್ಲದೆ ಪದವಿ ಪೂರ್ವ ಇಲಾಖೆ ಯಶಸ್ವಿಯಾಗಿ ಮುಗಿಸಿದೆ. ಪರೀಖ್ಷಾ ಕೊಠಡಿಗಳೂ ಹಾಗೂ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ.
ಒಟ್ಟು ಪರೀಕ್ಷಾ ಕೇಂದ್ರಗಳು : 1109
ಪರೀಕ್ಷೆ ಬರೆದವರ ಸಂಖ್ಯೆ : 726195
ಕಲಾ ವಿಭಾಗ – 234815
ವಾಣಿಜ್ಯ ವಿಭಾಗ – 247260
ವಿಜ್ಞಾನ ವಿಭಾಗ – 244120
ಭದ್ರತಾ ದೃಷ್ಟಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಸಿ ಕ್ಯಾಮೆರಾ ಕಣ್ಗಾವಲು ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಇತ್ತು. ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ಕಾಪಿ ಚೀಟಿ, ಡಿಬಾರ್ ಅನ್ನುವ ಸಮಸ್ಯೆ ಪರಿಹರಿಸಲು ಪಿಯು ಬೋರ್ಡ್ ಈ ಬಾರಿ ಹೆಚ್ಚಿನ ಸ್ಕ್ವಾಡ್ ನೇಮಕ ಮಾಡಿದೆ.
ಸಮಾಧಾನದ ವಿಚಾರ ಅಂದ್ರೆ ಈ ಬಾರಿ ಪರೀಕ್ಷೆ ವೇಳೆ ಹಿಜಾಬ್ ಗದ್ದಲವಿರಲಿಲ್ಲ. ಪರೀಕ್ಷಾರ್ಥಿಗಳಿಗೆ ಹಿಜಾಬ್ ನಿಷೇಧ ಮಾಡಲಾಗಿತ್ತು. ಕಳೆದ ವರ್ಷ ಕೆಲವು ವಿದ್ಯಾರ್ಥಿಗಳು ಇದೇ ಕಾರಣಕ್ಕೆ ಎಕ್ಸಾಂನಿಂದ ಹೊರಗೆ ಉಳಿದಿದ್ರು. ಆದ್ರೆ ಈ ವರ್ಷ ಆ ರೀತಿಯ ಹಿಜಾಬ್ ಪ್ರಕರಣ ಎಲ್ಲೂ ಕೇಳಿ ಬಂದಿಲ್ಲ.
ಮಾರ್ಚ್ 29 ರ ವರಗು ಪಿಯು ಪರೀಕ್ಷೆಗಳು ನಡೆಯಲಿದ್ದು, ಮೇ ಮೊದಲ ವಾರದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ