ಕೆನಡಾ: ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ (Kapil Sharma) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಕಾಮಿಡಿಗೆ (Comedy) ಅನೇಕ ಜನ ಅಭಿಮಾನಿಗಳಿದ್ದಾರೆ. ಅವರು ತಮ್ಮ ಸಿನಿಮಾ (Film) ಹಾಗೂ ಹಾಸ್ಯದ ಮೂಲಕ ಜನರನ್ನ ರಂಜಿಸುತ್ತಲೇ ಬಂದಿದ್ದಾರೆ. ಇದೀಗ ಅವರಿಗೆ ಶಾಕ್ ಆಗುವಂತಹ ಘಟನೆ ನಡೆದಿದ್ದು, ಅವರ ಕೆಫೆ (Cafe) ಮೇಲೆ ಗುಂಡಿನ ದಾಳಿ ಮಾಡಲಾಗಿದೆ.
KAPS CAFEಯಲ್ಲಿ ಗುಂಡಿನ ದಾಳಿ
ಕೆನಡಾದಲ್ಲಿ ಇತ್ತೀಚೆಗಷ್ಟೇ ಕಪಿಲ್ ಶರ್ಮಾ ಹೊಸ ಕೆಫೆಯನ್ನ ಆರಂಭಿಸಿದ್ದರು. ಅದಕ್ಕೆ KAPS CAFE ಸಹ ಹೆಸರಿಟ್ಟಿದ್ದರು. ಕೆನಡಾದ ಬ್ರಿಟಿಷ್ ಕೋಲಂಬಿಯಾದ ಸರ್ರೆಯಲ್ಲಿ ಇರುವ ಕೆಫೆಯ ಮೇಲೆ ಇಂದು ಗುಂಡಿನ ದಾಳಿ ನಡೆದಿದ್ದು, ಸದ್ಯದ ಮಾಹಿತಿ ಪ್ರಕಾರ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಇನ್ನು ದಾಳಿ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗುಂಡಿನ ದಾಳಿಗೆ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಸಿಸಿಟಿವಿ ಹಾಗೂ ಇತರ ದಾಖಲೆಗಳನ್ನ ವಶಪಡಿಸಿಕೊಂಡಿದ್ದು, ಕೆಫೆಯ ಮುಂದೆ ಹಾಗೂ ಹತ್ತಿರದಲ್ಲಿದ್ದ ಮನೆಗಳಿಗೆ ಸಹ ಗುಂಡು ತಾಗಿದೆ ಎನ್ನಲಾಗಿದೆ.
World Famous comedian Kapil Sharma’s newly inaugurated restaurant KAP’S CAFE shot at in Surrey, BC, Canada last night.
Harjit Singh Laddi, a BKI operative, NIA’s (INDIA ) most wanted terrorist has claimed this shoot out citing some remarks by Kapil@SurreyPolice pic.twitter.com/p51zlxXbOf— Ritesh Lakhi CA (@RiteshLakhiCA) July 10, 2025
ಖಲಿಸ್ತಾನಿಗಳಿಂದ ದಾಳಿ
ಇತ್ತೀಚೆಗೆ ಉದ್ಘಾಟನೆಯಾದ ರೆಸ್ಟೋರೆಂಟ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಅದರಲ್ಲೂ ಕೆನಡಾದಲ್ಲಿ ವಾಸಿಸುವ ಭಾರತೀಯರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿತ್ತು. ಈ ಸಮಯದಲ್ಲಿಯೇ ದಾಳಿ ಆಗಿದ್ದು, ನಿಜಕ್ಕೂ ಆತಂಕಕಾರಿ ಎನ್ನಬಹುದು. ಇನ್ನು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸಂಘಟನೆಯ ಕಾರ್ಯಕರ್ತ ಮತ್ತು ಎನ್‌ಐಎ ಪಟ್ಟಿಯಲ್ಲಿರುವ ಭಾರತದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕರಲ್ಲಿ ಒಬ್ಬನಾದ ಹರ್ಜಿತ್ ಸಿಂಗ್ ಲಡ್ಡಿ ಗುಂಡಿನ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಕಪಿಲ್ ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆಯೇ ಈ ದಾಳಿಗೆ ಕಾರಣ ಎಂದಿದ್ದಾರೆ.