Wednesday, February 19, 2025
Homeಬೆಂಗಳೂರುಬೆಂಗಳೂರು ಕರಗದಲ್ಲಿ ಬೆಂಕಿ ಅವಘಡ - ಹತ್ತಾರು ವಾಹನ ಭಸ್ಮ!

ಬೆಂಗಳೂರು ಕರಗದಲ್ಲಿ ಬೆಂಕಿ ಅವಘಡ – ಹತ್ತಾರು ವಾಹನ ಭಸ್ಮ!

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ವೇಳೆ ಅಚಾನಕ್ ಬೆಂಕಿ ಅವಘಡ ಸಂಭವಿಸಿದೆ. ಭಕ್ತಾದಿಗಳು ಹರಕೆ ತೀರಿಸುವ ಸಲುವಾಗಿ ಗುರುವಾರ ಅಂಟಿಸಿದ್ದ ಬೃಹತ್ ಕರ್ಪೂರದ ಗಟ್ಟಿಗಳಿಂದ ವಾಹನಗಳಿಗೆ ಬೆಂಕಿ ತಗುಲಿದೆ. ಸುದೈವವಶಾತ್ ಯಾವುದೇ ಪ್ರಾಣಾಪಾಯ ಅಥವಾ ನೋವುಗಾಯಗಳು ವರದಿಯಾಗಿಲ್ಲ.
ಕರಗ ಮಹೋತ್ಸವದ ಅಂಗವಾಗಿ ಭಕ್ತಾದಿಗಳು ಎನ್‍ಆರ್ ವೃತ್ತದಿಂದ ದೇವಾಲಯದವರೆಗೂ ಕರ್ಪೂರಗಳನ್ನು ಅಂಟಿಸಿದ್ದರು. ಐಸ್‍ಬಾಕ್ಸ್‍ಗಳನ್ನು ಇಟ್ಟು ಅದರ ಮೇಲೆ ಐವತ್ತು ಕೆಜಿಯಷ್ಟು ಬೃಹತ್ ಕರ್ಪೂರದ ಗಟ್ಟಿಗಳನ್ನು ಹಚ್ಚಿಡಲಾಗಿತ್ತು. ಅಕಸ್ಮಾತ್ತಾಗಿ ಪಕ್ಕದಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದ್ದು, ಹಲವು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ದೇವಾಲಯದ ಆಡಳಿತ ಮಂಡಳಿ ಧ್ವನಿವರ್ಧಕದ ಮುಖಾಂತರ ಭಕ್ತಾದಿಗಳಿಗೆ ಮುನ್ಸೂಚನೆ ನೀಡಿ ವಾಹನಗಳನ್ನು ತೆರವುಗೊಳಿಸಿದೆ. ಸ್ಥಳದಲ್ಲೇ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!