Saturday, May 16, 2026
Homeಕ್ರೈಂANNAMALAI: ಕೋಮುಗಲಭೆಗೆ ಪ್ರಚೋದನೆ: ಅಣ್ಣಾಮಲೈ ವಿರುದ್ಧ ಎಫ್ ಐಆರ್

ANNAMALAI: ಕೋಮುಗಲಭೆಗೆ ಪ್ರಚೋದನೆ: ಅಣ್ಣಾಮಲೈ ವಿರುದ್ಧ ಎಫ್ ಐಆರ್

ಧರ್ಮಪುರಿ: ಎರಡು ಗುಂಪುಗಳ ನಡುವೆ ಕೋಮು ಗಲಭೆ ಪ್ರಚೋದನೆ ನೀಡಿದ ಆರೋಪದ ಮೇಲೆ ತಮಿಳುನಾಡು (tamilnadu) ಬಿಜೆಪಿ (bjp) ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ವಿರುದ್ಧ ಧರ್ಮಪುರಿ (Dharmapuri) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಅಣ್ಣಾಮಲೈ ವಿರುದ್ಧ ಸೆಕ್ಷನ್ 153 (ಎ), 504, 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯ ಸೇಂಟ್ ಲೂರ್ಡ್ಸ್ ಚರ್ಚ್‌ನ ಹೊರಗೆ ಜನವರಿ 8 ರಂದು ಎನ್ ಮನ್ ಎನ್ ಮಕ್ಕಳ್ ಅವರ ರಾಲಿಯಲ್ಲಿ ಚರ್ಚ್‌ಗೆ ಪ್ರವೇಶಿಸುವುದನ್ನು ವಿರೋಧಿಸಿದ ಕ್ರಿಶ್ಚಿಯನ್ ಯುವಕರ ಗುಂಪಿನೊಂದಿಗೆ ಅಣ್ಣಾಮಲೈ ವಾಗ್ವಾದ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಚರ್ಚ್ ಪ್ರವೇಶಿಸದಂತೆ ತಡೆಯುವ ಹಕ್ಕನ್ನು ಪ್ರಶ್ನಿಸಿದ ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ಉಂಟಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಉದ್ರಿಕ್ತ ಜನರ ಗುಂಪನ್ನು ಚದುರಿಸಿ ರಾಜ್ಯ ಬಿಜೆಪಿ ಅಧ್ಯಕ್ಷರು ಚರ್ಚ್‌ಗೆ ಪ್ರವೇಶಿಸಲು ಮತ್ತು ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!