ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ತಮಿಳು ಭಾಷಿಕರು ಮತ್ತು ಕನ್ನಡಿಗರ ಮಧ್ಯೆ ಸಂಘರ್ಷಕ್ಕೆ ಎಡೆಮಾಡುವ ಪ್ರಚೋದನಾಕಾರಿ ಭಾಷಣ ಸಚಿವರು ಮಾಡಿದ್ದರು. ತಮಿಳು ಭಾಷಿಕರನ್ನು ಎತ್ತಿಕಟ್ಟಿ ಹಲ್ಲೆ ಮಾಡಲು ಸೂಚನೆ ನೀಡಿದ್ದರು ಎಂಬ ಮತ್ತೊಂದು ಆರೋಪ ಎದುರಾಗಿದೆ.
ಸಚಿವ ಮುನಿರತ್ನ ಮಾಡಿದ್ದು ಎನ್ನಲಾದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದ ಆರ್‌ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ದೂರು ನೀಡಿದ್ದರು. ಇದರ ಮೇರೆಗೆ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.