Wednesday, November 13, 2024
Homeಬೆಂಗಳೂರುಸ್ಯಾಂಕಿ ರಸ್ತೆ ಯ ಮರಗಳನ್ನು ಉಳಿಸಿ ಎಂದವರ ವಿರುದ್ಧ ಕ್ರಿಮಿನಲ್ ಕೇಸ್!

ಸ್ಯಾಂಕಿ ರಸ್ತೆ ಯ ಮರಗಳನ್ನು ಉಳಿಸಿ ಎಂದವರ ವಿರುದ್ಧ ಕ್ರಿಮಿನಲ್ ಕೇಸ್!

ನಗರದ ಪ್ರಸಿದ್ಧ ಕೆರೆಗಳ ಪೈಕಿ ಒಂದಾಗಿರುವ ಮಲ್ಲೇಶ್ವರದ ಸ್ಯಾಂಕಿ ಕೆರೆ ದಂಡೆಯಲ್ಲಿರುವ ಮರಗಳ ಉಳಿವಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ 70 ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಕಳೆದ ಫೆ.19 ರಂದು ಸುಮಾರು 200 ಮಂದಿ, ಸ್ಯಾಂಕಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಮರಗಳನ್ನು ಕಡಿಯಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾಗರಿಕರ ವಿರುದ್ಧ ಐಪಿಸಿ 341 (ಅಕ್ರಮ ಬಂಧನ), 141 (ಕಾನೂನುಬಾಹಿರವಾಗಿ ಗುಂಪುಗೂಡುವುದು) 149 ( ಕಾನೂನುಬಾಹಿರವಾಗಿ ಸಭೆ ನಡೆಸಬಹುದು), 283 (ಸಾರ್ವಜನಿಕರ ಸಂಚಾರಕ್ಕೆ ಅಪಾಯಕರ ರೀತಿಯಲ್ಲಿ ಅಡ್ಡಿ) ಮುಂತಾದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪೊಲೀಸರ ಕ್ರಮಕ್ಕೆ ನಗರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು ನಾವು ಶಾಂತಿಯುತ ಮೆರವಣಿಗೆ ನಡೆಸಿದ ಬಗ್ಗೆ ವಿಡಿಯೋ ಪುರಾವೆಗಳಿವೆ. ಆದರೂ ಸಹ ಪೊಲೀಸರು ವಿನಾಕಾರಣ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಒಡ್ಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!