Sunday, June 7, 2026
Homeಟಾಪ್ ನ್ಯೂಸ್TIME TABLE: ಎಸ್‌ಎಸ್‌ಎಲ್‌ಸಿ- ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

TIME TABLE: ಎಸ್‌ಎಸ್‌ಎಲ್‌ಸಿ- ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 2025 – 2026 ರನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ -1 ಹಾಗೂ ಪರೀಕ್ಷೆ-2 ರ ಅಂತಿಮ ವೇಳಾಪಟ್ಟಿಯನ್ನ (Time Table) ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.

ಸುತ್ತೋಲೆ ಹೊರಡಿಸಿದ ಪರೀಕ್ಷಾ ಮಂಡಳಿ
ಈ ಪರೀಕ್ಷೆ ವಿಚಾರವಾಗಿ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದ್ದು, 2025 ಹಾಗೂ 2026ರನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ -1 ಹಾಗೂ ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನ ಮಂಡಳಿಯ ಜಾಲತಾಣದಲ್ಲಿ ಪ್ರಕಟ ಮಾಡಲಾಗಿದೆ. ರಾಜ್ಯದ ಎಲ್ಲಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಶಾಲೆ ಹಾಗೂ ಕಾಲೇಜಿನ ಫಲಕಗಳಲ್ಲಿ ಈ ವೇಳಾಪಟ್ಟಿಯನ್ನ  ಪ್ರಕಟಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದೆ.

ಎಸ್​ಎಸ್​ಎಲ್​ಸಿ  ಪರೀಕ್ಷೆ ವೇಳಾಪಟ್ಟಿ

  • ಮಾರ್ಚ್ 18 (ಪ್ರಥಮ ಭಾಷೆ)- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ
  • ಮಾರ್ಚ್ 23– ವಿಜ್ಞಾನ, ರಾಜ್ಯಶಾಸ್ತ್ರ,  ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
  • ಮಾರ್ಚ್ 25 (ದ್ವಿತೀಯ ಭಾಷೆ)– ಇಂಗ್ಲೀಷ್,  ಕನ್ನಡ
  • ಮಾರ್ಚ್ 28– ಗಣಿತ, ಸಮಾಜಶಾಸ್ತ್ರ
  • ಮಾರ್ಚ್ 30)ತೃತೀಯ ಭಾಷೆ)–  ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ.
  • ಏಪ್ರಿಲ್ 01– ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್,  ಎಲಿಮೆಂಟ್ಸ್ ಆಫ್ ಮೆಕ್ಯಾನಕಲ್ ಇಂಜಿನಿಯರ್,
  • ಏಪ್ರಿಲ್ 2- ಸಮಾಜ ವಿಜ್ಞಾನ.

ಪಿಯುಸಿ ಪರೀಕ್ಷೆ 1 ರ ವೇಳಾಪಟ್ಟಿ

  • 28-2-2026– ಕನ್ನಡ, ಅರಬಿಕ್
  • 2-3-26-ಭೂಗೋಳಶಾಸ್ತ್ರ, ಮನಶಾಸ್ತ್ರ, ಸಂಖ್ಯಾಶಾಸ್ತ್ರ.
  • 3-3-26- ಇಂಗ್ಲೀಷ್.
  • 4-3-26- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
  • 5 -3-26- ಇತಿಹಾಸ.
  • 6-3-26-ಭೌತಶಾಸ್ತ್ರ
  • 7-3-26-ಐಚ್ಛಿಕ ಕನ್ನಡ,  ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • 9-3-26- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ.
  • 10-3-26- ಅರ್ಥಶಾಸ್ತ್ರ.
  • 11-3-26- ತರ್ಕಶಾಸತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ.
  • 12-3-26-ಹಿಂದಿ.
  • 13-3-26-ರಾಜ್ಯಶಾಸ್ತ್ರ.
  • 14-3-26- ಲೆಕ್ಕಶಾಸ್ತ್ರ, ಗಣಿತ,
  • 16-3-26- ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ.
  • 17-3-26- ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್​ನೆಸ್​​.

ಪಿಯುಸಿ ಪರೀಕ್ಷೆ 2 ರ ವೇಳಾಪಟ್ಟಿ

  • ಏಪ್ರಿಲ್ 25: ಕನ್ನಡ, ಅರಬಿಕ್
  • ಏಪ್ರಿಲ್ 27: ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಜೀವಶಾಸ್ತ್ರ
  • ಏಪ್ರಿಲ್ 28: ರಾಜ್ಯಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
  • ಏಪ್ರಿಲ್ 29: ಗಣಿತ, ಗೃಹ ಗಣಿತ, ಮೂಲ ವಿಜ್ಞಾನ
  • ಏಪ್ರಿಲ್ 30: ಅರ್ಥಶಾಸ್ತ್ರ
  • ಮೇ 2: ಇತಿಹಾಸ, ರಸಾಯನಶಾಸ್ತ್ರ
  • ಮೇ 4: ಇಂಗ್ಲಿಷ್
  • ಮೇ 5: ಹಿಂದಿ
  • ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ,  ಶಿಕ್ಷಣ ಶಾಸ್ತ್ರ.
  • ಮೇ 7– ಸಮಾಜ ಶಾಸ್ತ್ರ, ಸಂಖ್ಯಾಶಾಸ್ತ್ರ
  • ಮೇ 8– ಮನಶಾಸ್ತ್ರ, ಭೂಗೋಳ ಶಾಸ್ತ್ರ, ಭೂಗರ್ಭ ಶಾಸ್ತ್ರ
  • ಮೇ 9–  ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು. ಸಂಸ್ಕೃತ, ಫ್ರೆಂಚ್.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ನೋಂದಣಿಗೆ ಮಾರ್ಗಸೂಚಿ
2026ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್ಎಸ್ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಣಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಾರ್ಗಸೂಚಿಯನ್ನ ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ  ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಿದೆ.

ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳುವಂತೆ ಮಾಡಲು ಸೂಚಿಸಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 710 ರೂ. ಶುಲ್ಕ ನಿಗದಿಪಡಿಸಲಾಗಿದೆ. ಬಾಲಕಿಯರು, ಪರಿಶಿಷ್ಟರು, ಆದಾಯಮಿತಿಗೆ ಒಳಪಟ್ಟು ವಿವಿಧ ಪ್ರವರ್ಗಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗಲು 75% ಹಾಜರಾತಿ ಹೊಂದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ – ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿ ರಿಲೀಸ್‌

ಹೆಚ್ಚಿನ ಸುದ್ದಿ

Change Language »
error: Content is protected !!