Monday, February 9, 2026
Homeಟಾಪ್ ನ್ಯೂಸ್CONGRESS : ಟೆಂಡರ್‌ ವಿಚಾರಕ್ಕೆ ಪುರಸಭೆಯಲ್ಲೇ ಕಾಂಗ್ರೆಸ್​​​​ ಸದಸ್ಯರ ನಡುವೆ ಹೊಡಿಬಡಿ!

CONGRESS : ಟೆಂಡರ್‌ ವಿಚಾರಕ್ಕೆ ಪುರಸಭೆಯಲ್ಲೇ ಕಾಂಗ್ರೆಸ್​​​​ ಸದಸ್ಯರ ನಡುವೆ ಹೊಡಿಬಡಿ!

ದಾವಣಗೆರೆ : ಪುರಸಭೆ ವ್ಯಾಪ್ತಿಗೆ ಬರುವ ವಿವಿಧ ಟೆಂಡರ್​​ಗಳ ವಿಚಾರಕ್ಕೆ ಕಾಂಗ್ರೆಸ್​​​ ಸದಸ್ಯರ ನಡುವೆ ಮಾರಾಮಾರಿ ನಡೆದ ಘಟನೆ ಹೊನ್ನಾಳಿಯ ಪುರಸಭೆಯಲ್ಲಿ ಇಂದು ನಡೆದಿದೆ.

ಪುರಸಭೆಯಲ್ಲಿ ಸಭೆ ನಡೆಯುವಾಗಲೇ ಸದಸ್ಯರು ಪರಸ್ಪರ ಕೆನ್ನೆ-ಕೆನ್ನೆಗೆ ಬಾರಿಸಿಕೊಂಡು, ಅಂಗಿ ಎಳೆದಾಡಿ ಕಿರಿಕ್ ಮಾಡಿಕೊಂಡಿದ್ದಾರೆ. ಟೆಂಡರ್ ವಿಚಾರಕ್ಕೆ ಹೊನ್ನಾಳಿ ಪುರಸಭೆಯ ಕಾಂಗ್ರೆಸ್ ಸದಸ್ಯರು ಗುದ್ದಾಡಿದ್ದಾರೆ.

ಹೊನ್ನಾಳಿಯ ಮಾರ್ಕೆಟ್ ಟೆಂಡರ್, ಕುರಿ ಸಂತೆ ಸೇರಿ ಅನೇಕ ಟೆಂಡರ್‌ ವಿಚಾರಗಳ ಕುರಿತ ಸಭೆಯಲ್ಲಿ ಪ್ರಸ್ತಾಪವಾಗಿವೆ. ಈ ವೇಳೆ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದ ಆರಂಭವಾಗಿದೆ. ಸ್ಥಾಯಿ ಸಮಿತಿ ಸದಸ್ಯ ಹೊಸಕೆರೆ ಸುರೇಶ್ ಮೇಲೆ ಪುರಸಭೆ ಸದಸ್ಯ ಘಾಡ್ಜೀಲಾ ಸುರೇಶ್ ಕೆನ್ನೆಗೆ ಬಾರಿಸಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದಾಗ, ಕೆಲ ಸದಸ್ಯರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದ್ದಾರೆ.

ಆದರೆ ತುಂಬಿದ ಸಭೆಯಲ್ಲಿ ಈ ರೀತಿ ಕಿತ್ತಾಡಿದ್ದೀರಿ.. ನಿಮಗೆ ಜವಾಬ್ದಾರಿ ಇಲ್ಲವೇನು ಎಂದು ಪ್ರಶ್ನಿಸುತ್ತಿರುವ ಜನಸಾಮಾನ್ಯರು, ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!