ಶ್ರೀರಂಗಪಟ್ಟಣ: ಕೆಆರ್‌ಎಸ್ (KRS) ಜಲಾಶಯದಿಂದ ಸುತ್ತಮುತ್ತಲಿನ ಪ್ರದೇಶಗಳ ಎಲ್ಲಾ ನಾಲೆಗಳಿಗೆ ತಕ್ಷಣವೇ ನೀರನ್ನ ಹರಿಸಬೇಕು ಎಂದು ಆಗ್ರಹ ಮಾಡಿ ಭೂಮಿತಾಯಿ ಹೋರಾಟ ಸಮಿತಿಯ ರೈತರು (Farmer Protest) ಬುಧವಾರ ಚಾವಟಿ ಚಳುವಳಿ ಮಾಡಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ
ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದ ಎದುರು ಈ ಚಾವಟಿ ಹಿಡಿದು ಪ್ರತಿಭಟನೆ ಮಾಡಿದ್ದು, ನಾಲೆಗಳಿಗೆ ನೀರು ಬಿಡದೇ ಇದ್ದರೆ ಚಾವಟಿ ಏಟು ಎಂದು ಘರ್ಜನೆ ಮಾಡಿದ್ದಾರೆ. ಅಲ್ಲದೇ, ರೈತರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ, ನೀರಾವರಿ ಸಚಿವರು, ಜಿಲ್ಲೆಯ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹೋರಾತ್ರಿ ಧರಣೆ ನಡಸುವ ಎಚ್ಚರಿಕೆ
ಸದ್ಯ ಕೆಲ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಮಳೆ ಆಗುತ್ತಿದೆ. ಹಾಗಾಗಿ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಆದರೆ ಈ ಭಾಗದಲ್ಲಿ ಸರಿಯಾಗಿ ಮಳೆ ಆಗದ ಕಾರಣದಿಂದ ಬೆಳೆದ ಬೆಳೆಗಳು ಒಣಗಿ ಹೋಗುತ್ತಿದೆ. ಆದರೂ ಸಹ ಅಧಿಕಾರಿಗಳು ನಾಲೆಗಳಿಗೆ ನೀರು ಬಿಡಲು ಮೀನ ಮೇಷ ಎಣಿಸುತ್ತಿದ್ದಾರೆ. ನಮಗೆ ನಾಲೆಗಳಿಗೆ ನೀರು ಬಿಡುವ ವಿಚಾರವಾಗಿ ಭರವಸೆ ಸಿಗುವ ತನಕ ಅಹೋರಾತ್ರಿ ಚಳುವಳಿ ಮಾಡಲಾಗುತ್ತದೆ ಎಂದು ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಹೇಳಿದ್ದಾರೆ.
ಹೆಚ್ಚಾದ ಕೆಆರ್‌ಎಸ್ ಒಳ ಹರಿವು, ರೈತರ ಮೊಗದಲ್ಲಿ ಮೂಡಿದ ಮಂದಹಾಸ
ಮಂಡ್ಯ: ಹಳೆ ಮೈಸೂರು ಭಾಗದ ಜನರ ಪ್ರಮುಖ ಆಧಾರವಾಗಿರುವ ಕೃಷ್ಣರಾಜಸಾಗರ (KRS Dam) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಜಾಸ್ತಿ ಆಗುತ್ತಿದೆ. ಕಳೆದ ಆರು ತಿಂಗಳಿನಿಂದ ಕಡಿಮೆ ಆಗಿದ್ದ ನೀರಿನ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಇಂದು 5,734 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಹೇಗಿದೆ ಇಂದಿನ ನೀರಿನ ಮಟ್ಟ?
ಈ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆಯ ಪ್ರಮಾಣ ಜಾಸ್ತಿ ಇದೆ. ಇದರ ಪರಿಣಾಮವಾಗಿ ಡ್ಯಾಂಗೆ ಬರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಏ[ರಿಲ್ 5ರಂದು ಜಲಾಶಯಕ್ಕೆ 1,449 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಅಲ್ಲದೇ, ಈ ಜಲಾಶಯದ ನೀರಿನ ಗರಿಷ್ಟ ಮಟ್ಟ 80.90 ಅಡಿ ತಲುಪಿತ್ತು. ಇದರ ನಂತರ ಈ ಎರಡು ದಿನಗಳಲ್ಲಿ ಮತ್ತೆ ನೀರಿನ ಮಟ್ಟ ಜಾಸ್ತಿ ಆಗಿದ್ದು, ಎರಡು ಅಡಿಗಳಷ್ಟು ನೀರಿನ ಮಟ್ಟ ಹೆಚ್ಚಾಗಿದೆ. ಇಂದಿನ ನೀರಿನ ಮಟ್ಟ 82.45 ಅಡಿಗೆ (11.9 ಅಡಿ) ಏರಿಕೆ ಆಗಿದೆ. ವಿವಿಧ ನಾಲೆ ಹಾಗೂ ಕುಡಿಯುವ ನೀರಿಗಾಗಿ 777 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ತೀರಾ ಆತಂಕಕಾರಿ ಸ್ಥಿತಿ
ಆದರೆ, ಕಳೆದ ವರ್ಷದ ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಚಿತ್ರಣ ತೀರಾ ಆತಂಕ ಹುಟ್ಟಿಸುವಂತಿದೆ. ಕಳೆದ ವರ್ಷ ಇದೇ ದಿನ ಕಾವೇರಿ ಒಡಲಿಗೆ ಭಾರಿ ಪ್ರಮಾಣದ ಮಳೆಯಾಗಿದ್ದರಿಂದ ಕೆಆರ್‌ಎಸ್‌ಗೆ ಬರೋಬ್ಬರಿ 24,903 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಅಷ್ಟೇ ಅಲ್ಲದೆ, ಜಲಾಶಯ ಸಂಪೂರ್ಣ ಭರ್ತಿಯಾಗಿ ಭೋರ್ಗರೆಯುತ್ತಾ 23 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿತ್ತು.
ಕೊನೆಗೂ ದೇವರು ಕಣ್ಣು ಬಿಟ್ಟ – ಜಲಾಶಯಗಳಲ್ಲಿ ಏರಿತು ನೀರಿನ ಮಟ್ಟ!
ಬೆಂಗಳೂರು: ರಾಜ್ಯದಾದ್ಯಂತ (Karnataka) ತೀವ್ರ ಕಾಯುವಿಕೆಯ ನಂತರ ಕೊನೆಗೂ ಮುಂಗಾರು ಮಳೆ (Mansoon Rain) ಸಂಪೂರ್ಣವಾಗಿ ಬಿರುಸುಗೊಂಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಮಲೆನಾಡು ಹಾಗೂ ಹಳೆಯ ಮೈಸೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಹತ್ತಾರು ಅವಾಂತರಗಳ ನಡುವೆಯೇ ಬತ್ತಿ ಹೋಗಿದ್ದ ನದಿ, ಜಲಪಾತ ಹಾಗೂ ಜಲಾಶಯಗಳಿಗೆ (Dam) ಈಗ ಹೊಸ ಜೀವಕಳೆ ಬಂದಿದೆ.
ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜನರಲ್ಲಿ ಮೂಡಿದ್ದ ಆತಂಕ ದೂರಾಗುತ್ತಿದೆ.
ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದೆ. ತೀರ್ಥಹಳ್ಳಿ ಹಾಗೂ ಶೃಂಗೇರಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 3.24 ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯಕ್ಕೆ ಸದ್ಯ 20,565 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಡ್ಯಾಂನ 10 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ 18,051 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ.. ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್