Saturday, January 25, 2025
Homeಟಾಪ್ ನ್ಯೂಸ್ಬಿಜೆಪಿ ಪರ ಪ್ರಚಾರ: ಕಿಚ್ಚನನ್ನೇ ಕಿಚಾಯಿಸಿದ “ಕಿಚ್ಚ” ಸಿನಿಮಾ ದೃಶ್ಯ

ಬಿಜೆಪಿ ಪರ ಪ್ರಚಾರ: ಕಿಚ್ಚನನ್ನೇ ಕಿಚಾಯಿಸಿದ “ಕಿಚ್ಚ” ಸಿನಿಮಾ ದೃಶ್ಯ

ಬೆಂಗಳೂರು: ನಾನು ಬಿಜೆಪಿ ಪರ ಅಲ್ಲ ಬೊಮ್ಮಾಯಿ ಮಾಮ ಪರ ಪ್ರಚಾರ ಮಾಡ್ತೀನಿ ಅಂತ ಕಿಚ್ಚ ಸುದೀಪ್‌ ಹೇಳಿದಾಗಿನಿಂದ ನಟ ಸುದೀಪ್‌ ಮೇಲೆ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ.

ನಾನು ಸಿಎಂ ಬಸವರಾಜ್ ಬೊಮ್ಮಾಯಿಗೆ ಬೆಂಬಲ ನೀಡುತ್ತೇನೆ ಎಂಧು ಚಿತ್ರನಟ ಕಿಚ್ಚ ಸುದೀಪ್ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಅಭಿಮಾನಿಗಳು, ನಿಮಗಿದೆಲ್ಲಾ ಬೇಕಾಗಿತ್ತಾ? ಎಂದು ಟೀಖಿಸುತ್ತಿದ್ದಾರೆ.

ಈ ನಡುವೆ.. ಸುದೀಪ್ ನಾಯಕನಟನಾಗಿ ಕಿಚ್ಚ ಎಂಬ ಬಿರುದಾಂಕಿವನ್ನು ಪಡೆಯಲು ಕಾರಣವಾದ “ಕಿಚ್ಚ” ಸಿನಿಮಾದ ದೃಶ್ಯವನ್ನು ನೆಟ್ಟಿಗರು ಪೋಸ್ಟ್‌ ಮಾಡಿ ಕಿಚ್ಚನನ್ನು ಕಿಚಾಯಿಸಿದ್ದಾರೆ

ವೈರಲ್ ವಿಡಿಯೋದಲ್ಲಿ, “ನಾನು ಮುಖ್ಯಮಂತ್ರಿಯಾಗಬೇಕು, ಅವನು ಮುಖ್ಯಮಂತ್ರಿಯಾಗಬೇಕು ಎಂದು ಒಬ್ಬೊಬ್ಬ ಎಂಎಲ್‌ಎಗಳನ್ನು ಪರ್ಚೇಸ್ ಮಾಡಲು ಕೋಟಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಈನನ್ಮಕ್ಕಳು. ಯಾರ್ಯಾರ ಹತ್ರ ಎಷ್ಟೆಷ್ಟು ಹೊಡೆದೆ? ಎಷ್ಟೆಷ್ಟು ತಿಂದೆ ಎಂದು ಹೇಳದೆ ಹೋದರೆ ನ್ಯಾಯ ಅಲ್ಲ ಅಲ್ವಾ? ಅವರುಗಳಿಗೂ ಗೊತ್ತಾಗಲಿ ಅವರ ರಕ್ತ ಹೀರಿ ನೀವು ಎಷ್ಟು ಹಣ ಸಂಪಾದನೆ ಮಾಡಿದ್ದೀರಿ ಅಂತ” ಎಂಬ ಡೈಲಾಗ್‌ಗಳು ಕಂಡುಬರುತ್ತವೆ. ರಾಜ್ಯ ಆಳಲಿ ಎಂದು ವೋಟ್ ಹಾಗಿದ್ರೆ ಇವರೆಲ್ಲಾ ದುಡ್ಡು ಮಾಡೋಕೆ ನಿಂತಿದ್ದಾರೆ ಎಂದು ಸುದೀಪ್ ಆಸನಿಮಾ ದೃಶ್ಯದಲ್ಲಿ ಹೇಳುತ್ತಿರುವ ಡೈಲಾಗ್‌ಗಳು ಇದೀಗ ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಹೋಲಿಸಿ ವಿಡಿಯೋ ಶೆರ್‌ ಮಾಡಲಾಗುತ್ತಿದ್ದು ವಿಡಿಯೋ ವೈರಲ್ ಆಗಿದೆ.

ಹೆಚ್ಚಿನ ಸುದ್ದಿ

error: Content is protected !!