ರಾಯಚೂರು : ನೂರಕ್ಕೂ ಆಶಿಕಾ ದಿನಗಳ ವನವಾಸದ ನಂತರ ನಟ ದರ್ಶನ್ ಗೆ ಅಂತಿಮವಾಗಿ ಹೈ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿರುವ ಹಿನ್ನಲೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹೀಗಾಗಿ ಸಹಜವಾಗಿಯೇ ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಮಾನ್ವಿ ಗವಿಗಟ್ಟ ಬಾಸ್ ಫ್ಯಾನ್ಸ್ ❤️#DBoss #Darshan #BossofSandalwood#ChallengingStarDarshan pic.twitter.com/7dkcJnxfvd
— All India Challenging Star Darshan Fans (@AICSDF) December 13, 2024
ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಇಂದು ಜಾಮೀನು ಮಂಜೂರಾಗಿದ್ದು ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ರೇಣುಕಸ್ವಾಮಿ ಕೊಲೆ ನಡೆದ ದಿನದಿಂದ ಇಂದಿನ ವರೆಗೂ ದರ್ಶನ್ ಅಭಿಮಾನಿಗಳು ಆತಂಕದಲ್ಲಿ ಮುಳುಗಿದ್ದರು. ಈ ಮಧ್ಯೆ ದರ್ಶನ್ ಆರೋಗ್ಯ ಕೈ ಕೊಟ್ಟಿದ್ದು ಅಭಿಮಾನಿಗಳಿಗೆ ಇನ್ನಷ್ಟು ಆತಂಕ ಹುಟ್ಟುಹಾಕಿತ್ತು. ಈ ಮಧ್ಯೆ ದರ್ಶನ್ ಗೆ ಅಂತಿಮವಾಗಿ ಜಾಮೀನು ಸಿಕ್ಕಿರೋದು ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿದೆ.