ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪಾಕಿಸ್ತಾನವು ನಿನ್ನೆ ತಡರಾತ್ರಿವರೆಗೂ ಜಮ್ಮು ಮತ್ತು ಕಾಶ್ಮೀರದಿಂದ ರಾಜಸ್ಥಾನದವರೆಗೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಪಾಕಿಸ್ತಾನದ ಈ ಕುಕೃತ್ಯವನ್ನು ಭಾರತ ವಿಫಲಗೊಳಿಸುವಲ್ಲಿ ಯಶಸ್ವಿಯಾಯಿತು. ಈ ನಡುವೆ ಭಿಕ್ಷುಕ ದೇಶ ಪಾಕಿಸ್ತಾನವು ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡುತ್ತಿದೆ.
ಹೌದು.. ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಸು -30 ಎಂಕೆಐ ಯುದ್ಧ ವಿಮಾನವನ್ನು ಮುಜಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ದಲ್ಲಿ ಹೊಡೆದುರುಳಿಸಲಾಗಿದೆ ಮತ್ತು ಭಾರತೀಯ ಪೈಲಟ್ ಅನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ಆದರೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ನ ಫ್ಯಾಕ್ಟ್ ಚೆಕ್ ತಂಡ ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ.
Fake News Alert ‼️
Pakistani social media handles are claiming that a Sukhoi Su-30MKI was shot down in Muzaffarabad, capturing an Indian Pilot alive.#PIBFactCheck
✅ This Sukhoi SU-30MKI of the Indian Air Force (IAF) crashed at Undre Vasti of Kulwadi village near Pune-Ahamad… pic.twitter.com/Fr5GITYQzL
— PIB Fact Check (@PIBFactCheck) May 9, 2025
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿರುವ ಫೋಟೋಗಳು 2014 ರ ಅಕ್ಟೋಬರ್ 14 ರ ದ್ದಾಗಿದೆ. ಅಂದು ಮಹಾರಾಷ್ಟ್ರದ ಪುಣೆ-ಅಹ್ಮದ್‌ನಗರ ಹೆದ್ದಾರಿಯ ಬಳಿಯ ಕುಲ್ವಾಡಿ ಗ್ರಾಮದಲ್ಲಿ (ಉಂಡ್ರೆ ವಸ್ತಿ) ಸಂಭವಿಸಿದ Su-30MKI ವಿಮಾನ ಅಪಘಾತ ನಡೆದಿತ್ತು. ಹೀಗಾಗಿ ಈ ವೈರಲ್ ಕ್ಲೈಮ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ ಅಥವಾ ಯಾವುದೇ ಪೈಲಟ್ ಸಿಕ್ಕಿಬಿದ್ದಿಲ್ಲ ಎಂದು PIB ಸ್ಪಷ್ಟಪಡಿಸಿದೆ.
ಪಾಕಿಸ್ತಾನದಲ್ಲಿ Su-30MKI ಅಪಘಾತಕ್ಕೀಡಾಗಿದೆ ಮತ್ತು ಪೈಲಟ್ ಒಬ್ಬರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹೇಳಲಾಗುತ್ತಿದೆ. ಇದು 2014 ರಲ್ಲಿ ನಡೆದ ಘಟನೆಯ ಹಳೆಯ ಚಿತ್ರ. ದಯವಿಟ್ಟು ಅಂತಹ ಪರಿಶೀಲಿಸದ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಪಿಐಬಿ ಸಂದೇಶ ರವಾನಿಸಿದೆ.