Monday, April 21, 2025
Homeಟಾಪ್ ನ್ಯೂಸ್ಎಲೆಕ್ಷನ್ ತಲೆಬಿಸಿ ನಡುವೆ ಆರ್‌ಸಿಬಿ ಮ್ಯಾಚ್ ನೋಡಲು ಬಂದ ಸಿದ್ದರಾಮಯ್ಯ

ಎಲೆಕ್ಷನ್ ತಲೆಬಿಸಿ ನಡುವೆ ಆರ್‌ಸಿಬಿ ಮ್ಯಾಚ್ ನೋಡಲು ಬಂದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ತಲೆಬಿಸಿ ಮಾಡಿಕೊಂಡು ತಯಾರಿ ನಡೆಸುತ್ತಿವೆ. ಶತಾಯಗತಾಯ ಅಧಿಕಾರಕ್ಕೆ ಬರಬೇಕು ಅಂತ ಕಾಂಗ್ರೆಸ್ ಪಕ್ಷವೂ ಸಕಲ ಸಿದ್ದತೆ ಮಾಡಿಕೊಂಡಿದೆ. ಟಿಕೆಟ್‌ ಹಂಚಿಕೆ ಟೆನ್ಷನ್, ಪ್ರಚಾರ ಕಾರ್ಯ, ಪಕ್ಷವನ್ನು ಗೆಲ್ಲಿಸಬೇಕಾದ ಜವಾಬ್ದಾರಿ. ಇವೆಲ್ಲದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ರಿಕೆಟ್‌ ನೋಡಿ ರಿಲ್ಯಾಕ್ಸ್ ಆಗಿದ್ದಾರೆ.

ಎಲ್ಲಾ ಒತ್ತಡಗಳ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ನೆನ್ನೆ(ಏಪ್ರಿಲ್ 2) ನಡೆದ ಆರ್​ಸಿಬಿ ಪಂದ್ಯ ವೀಕ್ಷಣೆ ಮಾಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ರು.. ಮುಂಬೈ ಇಂಡಿಯನ್ಸ್​ ಹಾಗೂ ಆರ್​ಸಿಬಿ ತಂಡಗಳ ನಡುವಿನ ಮ್ಯಾಚ್‌ ನೋಡಿ ಎಂಜಾಯ್ ಮಾಡಿದ್ರು.

ಪಂದ್ಯ ವೀಕ್ಷಣೆ ಮಾಡಲು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ ಸ್ಪೀಕರ್​ ಬಸವರಾಜ ಹೊರಟ್ಟಿ ಸಾಥ್​ ನೀಡಿದ್ರು. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಕ್ರಿಕೆಟ್ ನನ್ನ ಇಷ್ಟದ ಆಟ ಹಾಗೂ ಆರ್‌ಸಿಬಿ ನನ್ನ ಹೆಮ್ಮೆಯ ತಂಡ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!