Sunday, January 25, 2026
Homeಟಾಪ್ ನ್ಯೂಸ್SHOCKING: ಏನಿದು ಅಚ್ಚರಿ? ಬೆಂಗಳೂರಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ದಂಗಾಯ್ತು ದುನಿಯಾ!

SHOCKING: ಏನಿದು ಅಚ್ಚರಿ? ಬೆಂಗಳೂರಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ದಂಗಾಯ್ತು ದುನಿಯಾ!

ಬೆಂಗಳೂರು : ಕಾಲ ಕುಲಗೆಟ್ಟೋಗಿದೆ.. ಪ್ರೀತಿ ಯಾವಾಗ, ಎಲ್ಲಿ ಮತ್ತು ಯಾರೊಂದಿಗೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪ್ರೀತಿ ಕುರುಡು ಅಂತಾರೆ. ಇದು ನಿಜವೆಂಬಂತೆ ಬೆಂಗಳೂರಿನಲ್ಲಿ (Bengaluru) ಒಂಚು ಅಚ್ಚರಿಯ ಘಟನೆ ನಡೆದಿದ್ಯಂತೆ.ಜಗತ್ತಿನಲ್ಲಿ ಪ್ರತಿಯೊಂದು ಹೆಣ್ಣಿಗೂ ತಾಯಿಯಾಗುವ (Motherhood ) ಹಕ್ಕಿದೆ. ಆದರೆ ಆ ಮಗುವನ್ನು ಪಡೆಯುವ ರೀತಿಯೂ ಮುಖ್ಯವಾಗಿರುತ್ತದೆ. ಈ ಪ್ರಕೃತಿಯ ಪ್ರಕಾರ ಒಂದು ಹೆಣ್ಣು ಗಂಡಿನಿಂದಲ್ಲೇ ಪಡೆಯಬೇಕು ಎಂಬ ನಿಯಮವಿದೆ. ಗಂಡು-ಹೆಣ್ಣು ಸೇರಿದಾಗ ಮಾತ್ರ ಸಂಬಂಧಗಳಿಗೆ ಅರ್ಥ ಇರುತ್ತದೆ. ಆದ್ರೆ ಸಲಿಂಗಿಗಳಲ್ಲಿ (Homosexuals) ಇದು ಸಾಧ್ಯವೇ..?

ಇದು 21ನೇ ಶತಮಾನ ಅಲ್ಲವೇ? ಇತ್ತೀಚಿನ ದಿನಗಳಲ್ಲಿ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಈಗಿನ ಟ್ರೆಂಡ್​​ ಪ್ರಕಾರ ಸಮಲಿಂಗಿ ಸಂಬಂಧಗಳು ಅಂದರೆ ಸಲಿಂಗ ಪ್ರೇಮ, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಭಾರತದ ಪದ್ಧತಿಗೂ ವಿರುದ್ಧವಾಗಿದೆ. ಇಂದಿಗೂ ಕೂಡ ಸಲಿಂಗ ಸಂಬಂಧಕ್ಕೆ ಕಾನೂನತ್ಮಕ ಸ್ಥಾನಮಾನ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವ ಪೋಸ್ಟ್​ವೊಂದು ವೈರಲ್ ಆಗಿದೆ. ಬೆಂಗಳೂರಿನ ಸಲಿಂಗಕಾಮಿ ದಂಪತಿಯಲ್ಲಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎಂಬ ಪೋಸ್ಟ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಖಿನ್ನತೆ, ಆತಂಕಗಳಿಂದ ಅಶ್ಲೀಲ ವಿಡಿಯೋ ವೀಕ್ಷಣೆ – ಅಪಾಯಕಾರಿ ಅಭ್ಯಾಸಕ್ಕೆ ಯುವಕರೇ ಹೆಚ್ಚು ಬಲಿ.!

ಸಲಿಂಗಿ ಗರ್ಭಿಣಿ?

ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿರುವ ಸಲಿಂಗಕಾಮಿ ದಂಪತಿಯಲ್ಲಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ದಿನಗಳಿಂದ ಹಲ್‌ಚಲ್‌ ಸೃಷ್ಟಿಸುತ್ತಿದೆ. ಅವರ ಫೋಟೋಗಳನ್ನೂ ರಿವೀಲ್‌ ಮಾಡಲಾಗಿದೆ. ಈ ಜೋಡಿ ತಮ್ಮ ಗರ್ಭಧಾರಣೆಯ ಬಗ್ಗೆ ಸಾರ್ವಜನಿಕವಾಗಿ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ಇವರ ಜೋಡಿ ಹೊರಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.

ವೈರಲ್ ಫೋಟೋದಲ್ಲಿ ಏನಿದೆ?

ಕೆಲವರು ಈ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ವೈರಲ್​ ಆಗಿದೆ. ಈ ಜೋಡಿ ತಮ್ಮ ಸಂಬಂಧ ಹಾಗೂ ಗರ್ಭಿಣಿಯಾಗಿರುವ ಬಗ್ಗೆ ಎಲ್ಲೂ ಹಂಚಿಕೊಂಡಿಲ್ಲ. ಆದರೆ ಈ ಫೋಟೋವನ್ನು ನೋಡಿ ಅನೇಕರು ಇದು ಎಐಯಿಂದ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

 

ಇಬ್ಬರೂ ಈ ಸಲಿಂಗ ಸಂಬಂಧವನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವ ಮಾಹಿತಿ ಇಲ್ಲ. ಒಂದು ಹೆಣ್ಣಿನಿಂದ ಮತ್ತೊಂದು ಹೆಣ್ಣು ಮಗು ಪಡೆಯಲು ಹೇಗೆ? ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

AI ಫೋಟೋ ನೋಡಿ ಬಕ್ರಾ ಆದ ಜನ

ಇದು ಕೃತಕ ಬುದ್ಧಿಮತ್ತೆಯಿಂದ (AI) ರೂಪುಗೊಂಡಿರುವ ಫೋಟೋ ಆಗಿರುವಲ್ಲಿಯೂ ಯಾವುದೇ ಸಂದೇಹವಿಲ್ಲ. ಒಂದು ಸುಳ್ಳು ಸುದ್ದಿಯನ್ನು ಯಾರೋ ಒಬ್ಬರು ಶೇರ್‌ ಮಾಡಿದರೆ, ಅದು ನಿಜನೋ, ಸುಳ್ಳೋ ಎಂದು ತಿಳಿಯದೇ ಶೇರ್‌ ಆಗುತ್ತಲೇ ಇರುತ್ತದೆ. ಅದರಲ್ಲಿಯೂ ಇಂಥ ಸುದ್ದಿಗಳು ಮೊದಲ ಆದ್ಯತೆ ಪಡೆಯುತ್ತವೆ. ಅದರಲ್ಲಿಯೂ ನೋಡಲು ಸುಂದರ ಯುವತಿಯರಾಗಿದ್ದರೆ ಮುಗಿದೇ ಹೋಯ್ತು. ವಿಡಿಯೋ, ಫೋಟೋಗಳು ಸಖತ್ ವೈರಲ್ ಆಗುತ್ತವೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!