Saturday, May 16, 2026
Homeಟಾಪ್ ನ್ಯೂಸ್MILIND SOMAN: ಯುರೋಪ್ ಟು ಆಫ್ರಿಕಾ ಸ್ವಿಮ್ಮಿಂಗ್ - ಅರವತ್ತರ ಹರೆಯದ ನಟನ ಫಿಟ್‌ನೆಸ್ ನೋಡಿ!-...

MILIND SOMAN: ಯುರೋಪ್ ಟು ಆಫ್ರಿಕಾ ಸ್ವಿಮ್ಮಿಂಗ್ – ಅರವತ್ತರ ಹರೆಯದ ನಟನ ಫಿಟ್‌ನೆಸ್ ನೋಡಿ!- VIDEO

ಬಾಲಿವುಡ್ ನಟ (Actor) ಹಾಗೂ ಭಾರತದ ಫಿಟ್‌ನೆಸ್ ಐಕಾನ್ ಎಂದೇ ಖ್ಯಾತರಾಗಿರುವ ಮಿಲಿಂದ್ ಸೋಮನ್ (Milind Soman) ಅವರು ತಮ್ಮ 60ನೇ ವಯಸ್ಸಿನಲ್ಲಿ ಮತ್ತೊಂದು ಅಸಾಧಾರಣ ಸಾಧನೆ (Achievement) ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಇತ್ತೀಚೆಗೆ ಅವರು ಯುರೋಪ್ ಖಂಡದಿಂದ ಆಫ್ರಿಕಾ ಖಂಡದವರೆಗೆ ಸುಮಾರು 15 ಕಿಲೋಮೀಟರ್ ದೂರವನ್ನು ಸಮುದ್ರದಲ್ಲಿ ಈಜುವ ಮೂಲಕ ಕ್ರಮಿಸಿದ್ದಾರೆ. ಈ ಸಾಹಸದ ಸುಂದರ ಕ್ಷಣಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

 

View this post on Instagram

 

A post shared by Milind Usha Soman (@milindrunning)

ಸ್ಪೇನ್ ದೇಶದ ತಾರಿಫಾದಿಂದ ಮೊರಾಕೊ ಕರಾವಳಿಯವರೆಗೆ ಹರಡಿರುವ ಜಿಬ್ರಾಲ್ಟರ್ ಜಲಸಂಧಿಯನ್ನು (Strait of Gibraltar) ಮಿಲಿಂದ್ ಯಶಸ್ವಿಯಾಗಿ ದಾಟಿದ್ದಾರೆ. ಈ ರೋಮಾಂಚಕ ಅನುಭವವನ್ನು “ಅದ್ಭುತವಾದ ಈಜು” ಎಂದು ಬಣ್ಣಿಸಿರುವ ಅವರು, ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಈ ಸಾಧನೆಯನ್ನು ಕಂಡು ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದು, “ಮುಂದಿನ ಗುರಿ ಹಾರ್ಮುಜ್ ಜಲಸಂಧಿ” ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅವರ ಮುಂದಿನ ಸಾಹಸಕ್ಕೆ ಹುರಿದುಂಬಿಸುತ್ತಿದ್ದಾರೆ. 60ರ ಹರೆಯದಲ್ಲೂ ಮಿಲಿಂದ್ ಅವರ ಈ ದೈಹಿಕ ಕ್ಷಮತೆ ಮತ್ತು ಧೈರ್ಯ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.

ಇದನ್ನೂ ಓದಿ : ಗೋವಾ ಪ್ರವಾಸದಲ್ಲಿ ಪ್ಯಾರಾಸೈಲಿಂಗ್ ವೇಳೆ ಕುತ್ತಿಗೆಗೆ ಬಿಗಿದ ಹಗ್ಗ!- ಪವಾಡದ ರೀತಿ ಮಹಿಳೆ ಪಾರು- VIDEO

ಹೆಚ್ಚಿನ ಸುದ್ದಿ

Change Language »
error: Content is protected !!