ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಎಪ್ರಿಲ್ 1 ರಿಂದ ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದ್ದು, ಶೇ. 12.12ರಷ್ಟು ಹೆಚ್ಚಳವಾಗಲಿದೆ. ಇದು ಔಷಧಿ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆಯಾಗಿದೆ.
ಅಗತ್ಯ ಔಷಧಗಳ ಬೆಲೆಯನ್ನು ಏರಿಕೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದ್ದು, ಇದರಲ್ಲಿ ನೋವು ನಿವಾರಕ, ಆ್ಯಂಟಿ ಬಯೋಟಿಕ್, ಉರಿಯೂತ ನಿವಾರಕ ಔಷಧ, ಹೃದ್ರೋಗ ಔಷಧ ಸೇರಿದಂತೆ ಅಗತ್ಯ ಔಷಧಗಳ ಪಟ್ಟಿಯ ಸುಮಾರು 800 ಔಷಧಗಳು ಒಳಗೊಂಡಿವೆ.
800 ಔಷಧಗಳನ್ನು ಹೊರತುಪಡಿಸಿ ಇನ್ನುಳಿದ ಔಷಧಗಳ ಬೆಲೆ ಏರಿಕೆಗೂ ರಾಷ್ಟ್ರೀಯ ಔಷಧ ಪ್ರಾಧಿಕಾರ ಅನುಮತಿ ನೀಡಿದ್ದು, ಗರಿಷ್ಠ ಶೇಕಡಾ 10ರಷ್ಟು ಏರಿಕೆ ಮಾಡಲು ಅನುಮತಿ ನೀಡಿದೆ.