Saturday, November 2, 2024
Homeರಾಜಕೀಯಮುಗಿಯದ ಆಜಾನ್ ವಿವಾದ : ಮತ್ತೆ ಕಿಡಿಕಾರಿದ ಕೆ.ಎಸ್.ಈಶ್ವರಪ್ಪ

ಮುಗಿಯದ ಆಜಾನ್ ವಿವಾದ : ಮತ್ತೆ ಕಿಡಿಕಾರಿದ ಕೆ.ಎಸ್.ಈಶ್ವರಪ್ಪ

ಎಸ್‍ಡಿಪಿಐನವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಜಾನ್ ಕೂಗಿದ್ದಲ್ಲದೇ ಸೊಕ್ಕಿನ ಮಾತನ್ನಾಡಿದ್ದಾರೆ. ಕೋಮು ಸೌಹಾರ್ದತೆ ಹಾಳು ಮಾಡಲು ಯತ್ನಿಸುತ್ತಿರುವ ಅವರ ವಿರುದ್ಧ ಸಿಎಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಆವರಣದಲ್ಲಿ ಆಜಾನ್ ಕೂಗಿದ ಆರೋಪದ ಮೇಲೆ ನಿಷೇಧಿತ ಪಿಎಫ್‍ಐ ಸಂಘಟನೆಯ ಸದಸ್ಯ ಎಂದು ಹೇಳಲಾದ ವ್ಯಕ್ತಿಯೊಬ್ಬನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯೆದರು ಎಸ್‍ಡಿಪಿಐ ಸಂಘಟನೆ ಪ್ರತಿಭಟನೆ ನಡೆಸುತ್ತಿರುವ ವೇಳೆ, ಕೆಲವು ಯುವಕರು ಇದು ನಮ್ಮ ತಾಯಿಗೆ ಮಾಡಿದ ಅವಮಾನವಲ್ಲ. ನಮ್ಮ ಅಲ್ಲಾಗೆ ಮಾಡಿದ ಅವಮಾನ ಎಂದು ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ನಾಳೆ ವಿಧಾನಸೌಧದಲ್ಲಿಯೂ ಆಜಾನ್ ಕೂಗಲಿದ್ದೇವೆ ಏನು ಮಾಡ್ತೀರಾ? ಎಂದು ಪ್ರಶ್ನಿಸಿದ್ದರು.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ ಕೆ.ಎಸ್.ಈಶ್ವರಪ್ಪ ಆಜಾನ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಾನು ಉಲ್ಲೇಖಿಸಿದ್ದೇನೆ ಅಷ್ಟೇ ಎಂದು ಸಮರ್ಥಿಸಿಕೊಂಡರು. ಜೊತೆಗೆ ನಾನು ಅಲ್ಲಾಗೆ ಅಪಮಾನ ಮಾಡಿಲ್ಲ. ನಾಲ್ಕು ಮೈಕ್ ಹಾಕಿ ಕೂಗುವುದು ಅಲ್ಲಾಗೆ ಮಾಡುವ ಅಪಮಾನವಲ್ಲವೇ? ಹೀಗೆಲ್ಲಾ ಕೂಗಿದರೆ ಅಲ್ಲಾನಿಗೆ ಸಂತೋಷವಾಗುತ್ತದೆಯೇ ಎಂದು ಮತ್ತೆ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!