ರಾಕಿಂಗ್ ಸ್ಟಾರ್ ಯಶ್ ಅವರಿಗೆ (Actor Yash) ಇಂದು ಡಬಲ್ ಧಮಾಕಾ. ಯಶ್ ಇಂದು 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ ಮತ್ತೊಂದೆಡೆ ಯಶ್ ಟಾಕ್ಸಿಕ್ (Toxic) ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿ ಎಲ್ಲೆಡೆ ಅಬ್ಬರಿಸುತ್ತಿದೆ.
ಯಶ್ ಹವಾ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಒಂದೇ ಒಂದು ಟೀಸರ್ ಗೆ ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ಟಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ಕೂಡ ತಿರುಗಿನೋಡುವಂತೆ ಮಾಡಿದೆ.
ಟಾಕ್ಸಿಕ್ ರಾಯ ಹೆಸರಿನ ಗುಟ್ಟು ಇದೇನಾ..?
ರಾಯ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸ್ಕೊಂಡಿದ್ದು ಬೋಲ್ಡ್ ಆ್ಯಂಡ್ ಅಗ್ರೆಸ್ಸಿವ್ ರಾಯನ ಪರಿಚಯ ಆಗಿದೆ. ಹಾಗಾದ್ರೆ ರಾಯ ಅಂದ್ರೇನು ಎಂಬ ಚರ್ಚೆ ಉಂಟಾಗಿದೆ. ಒಬೊಬ್ಬರು ಒಂದೊಂದು ವಿಧದಲ್ಲಿ ರಾಯ ಹೆಸರನ್ನ ಡೀಕೋಡ್ ಮಾಡುತ್ತಿದ್ದಾರೆ.
ರಾ ಅಂದ್ರೆ ರಾಕಿಂಗ್ ಸ್ಟಾರ್ ‘ಯ’ ಅಂದ್ರೆ ಯಶ್ ಎಂದೂ ಆಗಬಹುದು. ಇಷ್ಟೇ ಅಲ್ಲ ‘ರಾ’ ಅಂದ್ರೆ ಯಶ್ ಪತ್ನಿ ರಾಧಿಕಾ ಪಂಡಿತ್ ಹಾಗೂ ‘ಯ’ ಅಂದ್ರೆ ಯಶ್ ಎಂದು ಇನ್ನೊಂದು ವಿಧದಲ್ಲೂ ಡಿಕೋಡ್ ಮಾಡಲಾಗುತ್ತಿದೆ.
ಯಶ್ ಮತ್ತು ರಾಧಿಕಾ ದಂಪತಿ ಸಿನಿಮಾ ಇಂಡಸ್ಟ್ರಿಯಲ್ಲಿ ಆದರ್ಶ ಜೋಡಿಯಾಗಿ ಖ್ಯಾತರಾಗಿದ್ದಾರೆ. ಈ ಹೆಸರು ಪರ್ಸನಲ್ ಟಚ್ ಆಗಿರಬಹುದು ಎಂಬ ಚರ್ಚೆಯು ಅಭಿಮಾನಿಗಳ ಕಾತರಿ ಹೆಚ್ಚಿಸಿದೆ. ರಯಾ ಹೆಸರಿನ ಹಿಂದೆ ಯಶ್ ಮತ್ತು ರಾಧಿಕಾ ಅವರ ಪ್ರೀತಿಯ ಕಥೆಯೇ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಟಾಕ್ಸಿಕ್ ಟೀಸರ್ ನೋಡಿ ಸುದೀಪ್ ಫಿದಾ
ನಟ ಕಿಚ್ಚ ಸುದೀಪ್ ಕೂಡ ಟಾಕ್ಸಿಕ್ ಟೀಸರ್ ನೋಡಿ ಮೆಚ್ಚಿದ್ದಾರೆ. ಯಶ್ ಟ್ಟೀಟ್ ಮಾಡಿ ಟೀಸರ್ ಲಿಂಕ್ ಪೋಸ್ಟ್ ಮಾಡಿದ್ದಾರೆ. ಅದನ್ನು ರೀಟ್ವೀಟ್ ಮಾಡಿ ‘ಯಶ್‌ಗೆ ಶುಭಾಶಯ. ಅಲೆಗಳ ವಿರುದ್ಧ ಸಾಗಲು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕರೆದೊಯ್ಯಲಿ. ನೀವು ಅದರ ಮೇಲೆ ದೃಷ್ಟಿ ನೆಟ್ಟಿದ್ದೀರಿ. ಶುಭವಾಗಲಿ’ ಎಂದು ಬರೆದಿದ್ದಾರೆ.
ಆಲಿಯಾ ವಿಶ್!
ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಹೀಗಿರುವಾಗ ಬಾಲಿವುಡ್ ತಾರೆಯರು ಕೂಡ ಯಶ್ ನಟನೆ ನೋಡಿ ಫಿದಾ ಆಗಿದ್ದಾರೆ ಎನ್ನಬಹುದು. ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಟೀಸರ್ ಅನ್ನು ತಮ್ಮ ಇನ್ಸಗ್ರಾಮ್ನಲ್ಲಿ ಡೈನಮೈಟ್ ಎಂದು ಬರೆದು ಕೊಂಡಿದ್ದಾರೆ.
ಮಾರ್ಚ್ 2026ರಲ್ಲಿ ತೆರೆ ಮೇಲೆ ಬರಲಿದೆ ಟಾಕ್ಸಿಕ್!
ಯಶ್ ಅವರು KGF ಸಿರೀಸ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಟಾಕ್ಸಿಕ್ ಚಿತ್ರವು ಅವರ ಕೆರಿಯರ್‌ನಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ ಎಂಬ ನಿರೀಕ್ಷೆಯಿದೆ. ಚಿತ್ರ ಮಾರ್ಚ್ 19ಕ್ಕೆ ರಿಲೀಸ್ ಆಗಲಿದೆ. ಈ ಟೀಸರ್ ಯಶ್ ಅವರ ಹುಟ್ಟುಹಬ್ಬಕ್ಕೆ ಅತ್ಯುತ್ತಮ ಗಿಫ್ಟ್ ಆಗಿದೆ.
RAYA
Toxic : A Fairy Tale for Grown-Ups in cinemas worldwide on 19-03-2026#ToxicTheMovie pic.twitter.com/fpSdI8utAv
— Yash (@TheNameIsYash) January 8, 2026
ಇದನ್ನೂ ಓದಿ: ‘ಐ ಲವ್ ಯೂ’ ಎನ್ನುತ್ತಿದ್ದಂತೆಯೇ ಒಪ್ಪಿದೆ! ಮೊದಲ ಪ್ರೀತಿ ನೆನೆದು ಕೆಂಪಾಯ್ತು ಅನುಷ್ಕಾ ಕೆನ್ನೆ