Sunday, January 25, 2026
Homeಟಾಪ್ ನ್ಯೂಸ್ENTERTAINMENT: ‘ನಟಿಸಿದ ಎಲ್ಲಾ ನಟರ ಮೇಲೆ ಲವ್ ಆಗಿತ್ತು..’ ಬೋಲ್ಡ್ ಹೇಳಿಕೆ ಕೊಟ್ಟ ಸುರಸುಂದರಿ!

ENTERTAINMENT: ‘ನಟಿಸಿದ ಎಲ್ಲಾ ನಟರ ಮೇಲೆ ಲವ್ ಆಗಿತ್ತು..’ ಬೋಲ್ಡ್ ಹೇಳಿಕೆ ಕೊಟ್ಟ ಸುರಸುಂದರಿ!

ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆ ಯಾರಿಗೂ ಹೆಚ್ಚೇನೂ ಹೇಳಬೇಕಾಗಿಯೇ ಇಲ್ಲ. ಮಿಸ್ ಇಂಡಿಯಾ ಆಗಿ, ಮಿಸ್ ವರ್ಲ್ಡ್ ಆಗಿ ಮಿಂಚಿದ್ದ ಪ್ರಿಯಾಂಕಾ ಚೋಪ್ರಾ ಅವರು ಆ ಬಳಿಕ ನಟಿಯಾಗಿ ಬಾಲಿವುಡ್ ಚಿತ್ರರಂಗವನ್ನು ಆಳಿದವರು.

ಭಾರತೀಯ ಸಿನಿಮಾ ಜಗತ್ತಿನ ಅತ್ಯಂತ ಬೇಡಿಕೆಯ ನಾಯಕಿಯರಲ್ಲಿ ಅವರು ಒಬ್ಬರು. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ ಈ ನಟಿ, ಈಗ ಹಲವು ವರ್ಷಗಳ ನಂತರ ಮತ್ತೊಂದು ಪ್ರಾಜೆಕ್ಟ್ ಮಾಡುತ್ತಿದ್ದಾರೆ. 2002ರಲ್ಲಿ ತಮಿಳು ಸಿನಿಮಾ ‘ತಮಿಳನ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕಾ ಚೋಪ್ರಾ ಅವರು ಆ ಬಳಿಕ ಬರೋಬ್ಬರಿ ಒಂದು ದಶಕ್ಕೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿರುವ ನಟಿ.

ತಮಿಳು ಸಿನಿಮಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಹಿಂದಿಯಲ್ಲಿ 25ಕ್ಕು ಹೆಚ್ಚು ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ನೀಡಿದ್ದ ಹಳೇ ಸಂದರ್ಶನವೊಂದರಲ್ಲಿ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. ‘ತಾವು ಕೆಲಸ ಮಾಡಿದ ಎಲ್ಲಾ ನಾಯಕರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಮತ್ತು ಅವರು ಬಯಸಿದ ಸಂಬಂಧಕ್ಕಾಗಿ ಕಾಯುತ್ತಿರುವುದಾಗಿ’ ಪ್ರಿಯಾಂಕಾ ಚೋಪ್ರಾ ಹೇಳಿದ್ದರು.‌

ಅಲೆಕ್ಸ್ ಕೂಪರ್ ಪಾಡ್‌ಕ್ಯಾಸ್ಟ್ ಕಾಲ್ ಹರ್ ಡ್ಯಾಡಿ ಜೊತೆಗಿನ ಹಿಂದಿನ ಸಂದರ್ಶನದಲ್ಲಿ ಪ್ರಿಯಾಂಕಾ ‘ನಾನು ಕೆಲಸ ಮಾಡಿದ ಎಲ್ಲ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಆದರೆ ನಾನು ಒಂದೇ ಸಂಬಂಧದಲ್ಲಿ ಉಳಿಯಲಿಲ್ಲ.. ಕಾರಣ ನನಗೆ ಬೇಕಾದ ರೀತಿಯಲ್ಲಿ ಆ ವ್ಯಕ್ತಿ ಇಲ್ಲದಿರುವುದು.. ಸಂಬಂಧ ಹೇಗಿರಬೇಕು ಎಂಬ ಕಲ್ಪನೆ ನನಗಿತ್ತು.. ಹೀಗಾಗಿ ನಾನು ಆ ರೀತಿಯ ಸಂಬಂಧವನ್ನು ಹುಡುಕುತ್ತಿದ್ದೆ’ ಎಂದು ಹೇಳಿದ್ದಾರೆ.

‘ನಾನು ಅನೇಕ ಮಹಾನ್ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಕೆಲವು ಸಂಬಂಧಗಳು ಕೆಟ್ಟದಾಗಿ ಕೊನೆಗೊಂಡವು. ಆದರೆ ನನ್ನ ಕೊನೆಯ ಡೇಟಿಂಗ್ ಮುರಿದುಬಿದ್ದ ನಂತರ, ನಾನು ಸುಮಾರು 2 ವರ್ಷಗಳ ಕಾಲ ಪ್ರೀತಿಯಿಂದ ದೂರವಿದ್ದೆ’ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದರು.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರ ವಿವಾಹವು ಎರಡು ವಿಭಿನ್ನ ಸಮಾರಂಭಗಳನ್ನು ಒಳಗೊಂಡಿತ್ತು. ಒಂದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ವಿವಾಹ ಮತ್ತು ಒಂದು ಹಿಂದೂ ಸಂಪ್ರದಾಯದ ಮದುವೆ.

ವಾರಾಣಸಿ ಚಿತ್ರದಲ್ಲಿ ನಟಿಸುತ್ತಿರೋ ಪಿಗ್ಗಿ
ನಟಿ ಪ್ರಿಯಾಂಕಾ ಚೋಪ್ರಾ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರ, ಮಹೇಶ್ ಬಾಬು ನಟನೆಯ ‘ವಾರಣಾಸಿ’ ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹೈದ್ರಾಬಾದ್‌ನಲ್ಲಿ ನಡೆದ ಟೈಟಲ್ ಲಾಂಚ್ ಈವೆಂಟ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಖತ್ ಮಿಂಚಿದ್ದಾರೆ.

ಇದನ್ನೂ ಓದಿ: ಆ ಒಂದೇ ಸೀನ್​​​​​..​​​​​​​​​​​​​​​​​ ಬಾಂ*ಬ್ ಸಿಡಿಸಿದ ಯಶ್, ಟಾಕ್ಸಿಕ್ ‘ರಾಯ’ ಹೆಸರಿನ ಗುಟ್ಟೇನು?- VIDEO

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!