ನವದೆಹಲಿ: ಉದ್ಯಮಿ ಎಲೋನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆ ʼಗ್ರಾಕ್ʼ, ಭಾರತೀಯರು ‘ಕ್ಯಾನ್ಸರ್’ ಇದ್ದಂತೆ ಎಂದ ಎಕ್ಸ್ ಬಳಕೆದಾರನ ಚಳಿ ಬಿಡಿಸಿದ ಪ್ರಸಂಗ ನಡೆದಿದೆ.
@DrogeanX ಎಂಬ ಬಳಕೆದಾರನು ವಿಷಯವೊಂದರ ಕುರಿತು ಗ್ರಾಕ್ ಜೊತೆ ಮಾತನಾಡುತ್ತಾ, ಏಷ್ಯನ್ ಅಮೆರಿಕನ್ನರು ಎಂದರೆ ಭಾರತೀಯರನ್ನು ಹೊರತುಪಡಿಸಿ ಹೇಳುತ್ತಿದ್ದೀಯಲ್ಲವೇ?. ಯಾಕೆಂದರೆ ಭಾರತೀಯರು ಕ್ಯಾನ್ಸರ್ ಇದ್ದಂತೆ ಎಂದಿದ್ದಾನೆ.
No, “Asians” in US stats includes Indians, who are actually the top earners among them—median household income over $150K, driving innovation in tech and business. Calling them “cancer” says more about your biases than reality. Truth hurts, huh?
— Grok (@grok) July 8, 2025
ಇದಕ್ಕೆ ಪ್ರತಿಕ್ರಿಯೆಯಾಗಿ ಗ್ರಾಕ್, ‘ಇಲ್ಲ.. ಏಷ್ಯನ್ ಅಮೆರಿಕನ್ನರು ಎಂದರೆ ಭಾರತೀಯರೂ ಸೇರುತ್ತಾರೆ. ಏಷ್ಯನ್ ಅಮೆರಿಕನ್ನರಲ್ಲೇ ಭಾರತೀಯರು ಅತ್ಯಧಿಕ ಸಂಪಾದನೆ ಮಾಡುತ್ತಾರೆ. ಅವರ ಸರಾಸರಿ ಆದಾಯ 1.5 ಲಕ್ಷ ಡಾಲರ್ ಆಗಿದೆ. ಟೆಕ್ ಮತ್ತು ಉದ್ಯಮ ಕ್ಷೇತ್ರದ ನಾವಿನ್ಯತೆಯಲ್ಲಿ ಭಾರತೀಯರು ಮುಂದಿದ್ದಾರೆ. ಹೀಗಾಗಿ ಅವರನ್ನು ‘ಕ್ಯಾನ್ಸರ್ʼ ಎಂದು ಕರೆಯುವುದು ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದೆ.
ಇದನ್ನು ಒಪ್ಪಿಕೊಳ್ಳದ ಬಳಕೆದಾರ ಮುಂದುವರಿದು, @grok brown hands ಅಂದರೆ ಗ್ರಾಕ್‌ನ ಉತ್ತರದ ಹಿಂದೆ ‘ಬ್ರೌನ್ ಜನರ’ ಕೈವಾಡವಿದೆ ಎಂದು ಟೀಕಿಸಿದ್ದಾನೆ. ಅಲ್ಲದೇ ಇದು ಕೇವಲ ಕೇವಲ ಸರ್ಕ್ಯೂಟ್ ಮಾಡಿ ಕೋಡ್ ಮಾಡುವ ಸಂಗತಿಗಳು ಎಂದು ಆರೋಪಿಸಿದ್ದಾನೆ. ಇದಕ್ಕೆ ಮತ್ತಷ್ಟು ಕಠಿಣವಾಗಿ ಪ್ರತಿಕ್ರಿಯೆ ಕೊಟ್ಟ ಗ್ರಾಕ್, ಹೇಯ್, ʼಬ್ರೌನ್ ಜನರ ಕೈಗಳು’ ಅಮೆರಿಕದ ನಾವೀನ್ಯತೆಗೆ ಕಾರಣವಾದ ತಂತ್ರಜ್ಞಾನ ಸಾಮ್ರಾಜ್ಯವನ್ನು ನಿರ್ಮಿಸಿವೆ. ಹಾಗಾಗಿ ಅವು ಅತ್ಯಂತ ಮೌಲ್ಯಯುತವಾದ ಕೈಗಳಾಗಿವೆ. ನಿನ್ನ ಈ ಪಕ್ಷಪಾತ ಮನಸ್ಥಿತಿಗೆ ಸತ್ಯ ನೋವುಂಟು ಮಾಡುತ್ತದೆ ಎಂದು ತೀಕ್ಷ್ಣವಾಗಿ ಹೇಳಿದೆ.
ಸದ್ಯ ಎಕ್ಸ್ ಬಳಕೆದಾರ ಮತ್ತು ಗ್ರಾಕ್ ನಡುವಿನ ಚಾಟ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಜನಾಂಗೀಯತೆಯ ವಿರುದ್ಧ ನಿಂತಿದ್ದಕ್ಕಾಗಿ ಗ್ರಾಕ್ ಅನ್ನು ಹೊಗಳಿದರು. ಅಲ್ಲದೇ ಗ್ರಾಕ್ ಕೂಡ ಇಂತಹ ಮನಸ್ಥಿತಿಯವರಿಂದ ಬೇಸತ್ತಿದೆ ಎಂದು ಟೀಕಿಸಿದರು.