ನವದೆಹಲಿ: ಟ್ವಿಟ್ಟರ್ ಮುಖ್ಯಸ್ಥ ಮತ್ತು ಬಿಲಿಯಾಧಿಪತಿ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಮಸ್ಕ್ ಫಾಲೋ ಮಾಡುತ್ತಿರುವ 195 ಮಂದಿಯ ಪಟ್ಟಿಯಲ್ಲಿ ಪ್ರಧಾನಿಯ ನರೇಂದ್ರ ಮೋದಿ ಹೆಸರು ಕಾಣಿಸಿಕೊಂಡಿದ್ದು ಆ ಬಳಿಕ ಇದರ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿದೆ.
134.3 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಎಲಾನ್ ಮಸ್ಕ್ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವವರು.
ಪ್ರಧಾನಿ ಮೋದಿ ಅವರಿಗೂ 87 ಮಿಲಿಯನ್ ಫಾಲೋವರ್ ಗಳಿದ್ದು, ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಜಾಗತಿಕ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು.
ಮಸ್ಕ್ ಈ ರೀತಿ ಪ್ರಧಾನಿಯವರನ್ನು ಫಾಲೋ ಮಾಡಿದ ನಂತರ ಟ್ವಿಟರ್ ನಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಟೆಸ್ಲಾದ ತಯಾರಿಕಾ ಘಟಕಗಳು ಭಾರತದಲ್ಲಿ ಆರಂಭವಾಗಲಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.