ಚುನಾವಣಾ ನೀತಿಸಂಹಿತೆ ಜಾರಿ ಉಲ್ಲಂಘಿಸಿದಕ್ಕಾಗಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಇರುವ ಆಂಬುಲೆನ್ಸ್ ಅನ್ನು ಚುನಾವಣಾ ಅಧಿಕಾರಿಗಳು ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಆಂಬ್ಯುಲೆನ್ಸ್ ನಲ್ಲಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಹಾಗೂ ಕನಕಗಿರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಾ.ವೆಂಕಟರಮಣ ಫೋಟೋಗಳನ್ನು ಅಂಟಿಸಲಾಗಿತ್ತು.
‘ಮಾದರಿ ನೀತಿ ಸಂಹಿತೆ ಜಾರಿಯಾದ ಮೇಲೆಕ ಮತದಾರರ ಮೇಲೆ ಪ್ರಭಾವ ಬೀರುವ ಈ ರೀತಿಯ ವಾಹನಗಳನ್ನು ಬಳಸುವಂತಿಲ್ಲ. ಉಚಿತ ಸೇವೆಯ ಹೆಸರಿನಲ್ಲಿ ಆಂಬುಲೆನ್ಸ್ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಮಾಹಿತಿಯಿದೆ. ವಾಹನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಸಮೀರ ಮುಲ್ಲಾ ಹೇಳಿದ್ದಾರೆ.