Sunday, November 3, 2024
Homeಚುನಾವಣೆ 2023ಮತದಾರರಿಗೆ ಸೀರೆ ಆಮಿಷ - ಶಾಸಕಿ ಸೌಮ್ಯಾ ರೆಡ್ಡಿ ಕಾರು ಜಪ್ತಿ

ಮತದಾರರಿಗೆ ಸೀರೆ ಆಮಿಷ – ಶಾಸಕಿ ಸೌಮ್ಯಾ ರೆಡ್ಡಿ ಕಾರು ಜಪ್ತಿ

ಬೆಂಗಳೂರು : ಮತದಾರರಿಗೆ ಹಂಚಲು ಸೀರೆಗಳನ್ನು ಕೊಂಡೊಯ್ಯುತ್ತಿದ್ದ ಕಾರ್ ಅನ್ನು ಚುನಾವಣಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಈ ಕಾರ್ ಜಯನಗರ ಶಾಸಕಿ ಸೌಮ್ಯ ರೆಡ್ಡಿಯವರ ಒಡೆತನಕ್ಕೆ ಸೇರಿದ್ದಾಗಿದೆ.

ಸಾಮಾನ್ಯ ಪರಿಶೀಲನೆಯ ವೇಳೆ ಜಯನಗರದ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸೌಮ್ಯ ರೆಡ್ಡಿ ಕಾರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕಾರಿನಲ್ಲಿ ನೂರಾರು ಸೀರೆಗಳು ತುಂಬಿದ್ದ ಬಾಕ್ಸ್‍ಗಳು ಪತ್ತೆಯಾಗಿದ್ದವು ಇನ್ನೋವಾ ಕ್ರಿಸ್ಟಾ ಕಾರ್‍ನ್ನು ಪೊಲೀಸರು ಜಪ್ತಿ ಪಡಿಸಿಕೊಂಡು ತಿಲಕ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!