Saturday, January 25, 2025
Homeರಾಜಕೀಯತಾರಕಕ್ಕೇರಿದ ಚುನಾವಣಾ ಅಕ್ರಮ – ಜಪ್ತಿ ವಸ್ತುಗಳ ಮೌಲ್ಯ 60 ಕೋಟಿ ರೂ. ಗೆ ಏರಿಕೆ!

ತಾರಕಕ್ಕೇರಿದ ಚುನಾವಣಾ ಅಕ್ರಮ – ಜಪ್ತಿ ವಸ್ತುಗಳ ಮೌಲ್ಯ 60 ಕೋಟಿ ರೂ. ಗೆ ಏರಿಕೆ!

ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಜಪ್ತಿಪಡಿಸಿಕೊಳ್ಳಲಾದ ಹಣ ಮತ್ತು ವಸ್ತುವಿನ ವಿವರಗಳನ್ನು ಚುನಾವಣಾ ಆಯೋಗ ಬಹಿರಂಗ ಪಡಿಸಿದೆ. ಏ.4 ರವರೆಗೆ ರಾಜ್ಯಾದ್ಯಂತ 17,36,04,076 ರೂ. ನಗದು ಹಣ ಹಾಗೂ 22,35,85,130 ರೂ. ಮೌಲ್ಯದ 3,27,604 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದೆ.
ರಾಜ್ಯಾದ್ಯಂತ ವಿಚಕ್ಷಣ ದಳ, ಕಣ್ಗಾವಲು ತಂಡಗಳು, ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಅಬಕಾರಿ ಇಲಾಖೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ 42ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಮತ್ತು 8.50 ಕೋಟಿ ರೂ. ಮೌಲ್ಯದ ಬಂಗಾರ, 65.19 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು, ಹಾಗೂ 10.79 ಕೋಟಿ ರೂ. ಮೌಲ್ಯದ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಚುನಾವಣಾ ಅಕ್ರಮಗಳಿಗೆ ಬಳಸಿದ 357 ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆ ಚುನಾವಣಾ ಅಕ್ರಮದ ಆರೋಪದ ಮಏಲೆ 415 ಎಫ್‍ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದ್ದು ಇದುವರೆಗೆ 60.99 ಕೋಟಿ ರೂ. ಮೌಲ್ಯದ ನಗದು ಮತ್ತಿತರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!