ಬೆಂಗಳೂರು : ಮತದಾರರಿಗೆ ಹಂಚಲು ತಂದಿದ್ದ 504 ಕುಕ್ಕರ್‍ಗಳನ್ನು ವಶಪಡಿಸಿಳ್ಳುವಲ್ಲಿ ಮತದಾರರ ನೋಂದಣಾಧಿಕಾರಿಗಳ ತಂಡ ಸಫಲವಾಗಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಎಂಬುವವರ ಮನೆಯ ಮೇಲೆ ಹಠಾತ್ ದಾಳಿ ನಡೆಸಿ ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ.
ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು. ಮತದಾರರರಿಗೆ ಆಮಿಷವೊಡ್ಡಲು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಿಲ್ ಶೆಟ್ಟಿ, ಈ ಹಿಂದೆ ಶಾಸಕ ರಾಮಲಿಂಗಾರೆಡ್ಡಿ ಹಂಚಿದ್ದ ಕಳಪೆ ಕುಕ್ಕರ್ ಬಗ್ಗೆ ನಾನು ಮಾಧ್ಯಮಗಳಲ್ಲಿ ದನಿಯೆತ್ತಿದ್ದೆ. ಆದರೆ ನೋಂದಣಾಧಿಕಾರಿ ಶಾಸಕರೊಡನೆ ಶಾಮೀಲಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕುಕ್ಕರ್ ಮೇಲಿರುವ ಹೆಸರು ರಾಮಲಿಂಗಾರೆಡ್ಡಿಯವರದ್ದು, ಚಿಹ್ನೆ ಕಾಂಗ್ರೆಸ್ ಪಕ್ಷದ್ದು ಎಂದು ಆರೋಪಸಿದ್ದಾರೆ.