Monday, April 21, 2025
Homeಬೆಂಗಳೂರುಬೆಂಗಳೂರಿನಲ್ಲಿ 2 ಲಕ್ಷ ವೃದ್ಧ ಮತದಾರರು – 2217 ಸೂಕ್ಷ್ಮ ಮತಗಟ್ಟೆಗಳು!

ಬೆಂಗಳೂರಿನಲ್ಲಿ 2 ಲಕ್ಷ ವೃದ್ಧ ಮತದಾರರು – 2217 ಸೂಕ್ಷ್ಮ ಮತಗಟ್ಟೆಗಳು!

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆ ಕುರಿತು ಬಿಬಿಎಂಪಿ ವಿಶೇಷ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನೊಳಗೊಂಡ ಮುಖ್ಯತಂಡ ರಚನೆಯಾಗಿದ್ದು, 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಎಕ್ಸ್‍ಪೆಂಡಿಚರ್ ಕ್ಷೇತ್ರಗಳೆಂದು ಘೋಷಿಸಿರುವುದಾಗಿ ಮಾಹಿತಿ ನೀಡಿದರು.
ನಗರದಲ್ಲಿ ಒಟ್ಟು 95,13,830 ಮಂದಿ ಮತದಾರರಿದ್ದು, ಅವರ ಪೈಕಿ ಮಹಿಳಾ ಮತದಾರರ ಸಂಖ್ಯೆ 45,85,824 ಇದೆ. ಪುರುಷ ಮತದಾರರು 49,26,270 ಇದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರ ಸಂಖ್ಯೆ 1,08,494 ಇದೆ . ಜೊತೆಗೆ ಎಂಬತ್ತು ವರ್ಷ ಮೀರಿರುವ ವಯೋವೃದ್ಧ ಮತದಾರರ ಸಂಖ್ಯೆ 2,36,719 ಇದೆ ಎಂದು ಆಯೋಗ ಮಾಹಿತಿ ನೀಡಿದೆ.
ಒಟ್ಟಾರೆ 8615 ಮತಗಟ್ಟೆಗಳ ಪೈಕಿ 2217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ಆಯೋಜನೆ ಮಾಡಲಾಗಿದ್ದು, 36 ಸ್ಥಳಗಳಲ್ಲಿ ಚೆಕ್‍ಪೋಸ್ಟ್ ನಿಯೋಜಿಸಲಾಗಿದೆ ಎಂದು ತಿಳಿಸಿರುವ ಆಯೋಗ, ಚೆಕ್ ಪೋಸ್ಟ್‍ಗಳ ಉಸ್ತುವಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೀಡಿರುವಾಗಿ ತಿಳಿಸಿದ್ದಾರೆ.
ಮತಗಟ್ಟೆಗಳಲ್ಲಿ ಜನಸಂದಣಿ ಬಗ್ಗೆ ತಿಳಿಯಲು ಬಿಬಿಎಂಪಿಯಿಂದ ವಿಶೇಷ ಆಪ್ ಬಿಡುಗಡೆ ಮಾಡಲು ಚಿಂತನೆ ನಡೆಸಿರುವುದು ಈ ಬಾರಿಯ ವಿಶೇಷವಾಗಿದೆ.

ಹೆಚ್ಚಿನ ಸುದ್ದಿ

error: Content is protected !!