ಬೆಂಗಳೂರು: 2025-26 ರಲ್ಲಿ ಎಸ್‌ಎಸ್‌ಎಲ್‌ಸಿಯ (SSLC) ವಾರ್ಷಿಕ ಪರೀಕ್ಷೆಯಲ್ಲಿ (Final Exam) ಮಕ್ಕಳ ಫಲಿತಾಂಶ ಹೆಚ್ಚಾಗಲಿ ಹಾಗೂ ಮಕ್ಕಳಿಗೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಇಲಾಖೆ (State Education Department) ಹೊಸ ಆದೇಶವನ್ನ ಹೊರಡಿಸಿದ್ದು, ಅಧಿಕಾರಿಗಳಿಗೆ ಅದನ್ನ ಪಾಲಿಸುವಂತೆ ಸೂಚನೆ ನೀಡಿದೆ
ಆದೇಶದಲ್ಲಿ ಏನೆಲ್ಲಾ ಇದೆ?
ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಡಿಸೆಂಬರ್ 2025ರ ಒಳಗೆ ಎಲ್ಲಾ ಪಠ್ಯಕ್ರಮಗಳನ್ನ ಮುಗಿಸಬೇಕು ಎಂದು ಹೇಳಲಾಗಿದ್ದು, ಇದರಿಂದ ಮಕ್ಕಳಿಗೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇನ್ನು ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಸರಿಯಾದ ಗಮನ ನೀಡಿ ಅಗತ್ಯವಾದ ಮಾಹಿತಿಗಳ ನೀಡಬೇಕು ಹಾಗೂ ಅವರಿಗೆ ಯಾವುದಾದರೂ ಸಹಾಯ ಬೇಕಿದ್ದರೆ ಮಾಡುವ ಮೂಲಕ ಅವರಿಗೆ ಧೈರ್ಯ ನೀಡಬೇಕು ಎಂದಿದೆ. ಸೇತುಬಂಧ ಪರೀಕ್ಷೆಯ ಆಧಾರದ ಮೇಲೆ ಗುರುತಿಸಲಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯವನ್ನ ಕೊಟ್ಟುಮ ವಿಶೇಷ ತರಗತಿಗಳನ್ನ ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.
ಜುಲೈ ತಿಂಗಳಿನಿಂದ ವಿಶೇಷ ತರಗತಿಗಳನ್ನ ಮಾಡಬೇಕು ಹಾಗೂ ಬರವಣಿಗೆಯ ಗುಣಮಟ್ಟ ಹೆಚ್ಚಿಸಲು ಮಾದರಿ ಪ್ರಶ್ನೆ ಪತ್ರಿಗಳನ್ನ ಬಿಡಿಸಲು ಮಕ್ಕಳಿಗೆ ನೀಡಬೇಕು. ಇದರ ಜೊತೆಗೆ ಶಾಲೆಯಲ್ಲಿ ಪ್ರಾರ್ಥನಾ ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನ ಮಾಡಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಹಾಗೆಯೇ ಪೂರ್ಣಗೊಳಿಸಲಾದ ಪಠ್ಯಗಳಿಗೆ ಲಿಖಿತ ಪರೀಕ್ಷೆ ನೀಡುವ ಮೂಲಕ ಅವರಿಗೆ ಯಾವುದೇ ಗೊಂದಲವಿದ್ದರೆ ಪರಿಹಾರ ನೀಡಬೇಕು. ತಪ್ಪದೇ ಶಾಲೆಯಲ್ಲಿ 2 ತಿಂಗಳಿಗೊಮ್ಮೆ ಪೋಷಕರ ಸಭೆ ಮಾಡಿ, ಮಕ್ಕಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಪಡೆಯಬೇಕು.
To achieve one of the major objectives of the Department of School Education i.e, to improve the results of the SSLC Examination for the year 2025-26, a circular has been issued regarding various measures to be followed in all the schools. #SSLCResults #SSLC #excellence #learning pic.twitter.com/f81cdMlpaA
— School Education & Literacy, GOK (@ShalaShikshana) July 10, 2025
ಶಾಲೆಯಿಂದ ಹೊರಗುಳಿದ ಮಕ್ಕಳನ್ನ ಕರೆತರಬೇಕು
ಇನ್ನು ಶಿಕ್ಷಣ ಇಲಾಖೆ ನೀಡಿರುವ ಆದೇಶದಲ್ಲಿ ಮುಖ್ಯವಾಗಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಮನೆಗೆ ಭೇಟಿ ನೀಡಿ ಅವರನ್ನ ಶಾಲೆಗೆ ಬರುವಂತೆ ಮಾಡಬೇಕು ಎಂದಿದೆ. ಅದರ ಜೊತೆಗೆ ಮಕ್ಕಳು ಹೆಚ್ಚು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು ಹಾಗೂ ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳವೇಕು ಎಂದು ಇಲಾಖೆ ಹೇಳಿದೆ.
ಈ ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳ ಒತ್ತಡವನ್ನ ಕಡಿಮೆ ಮಾಡಲು ಆಟದ ಅವಧಿಯನ್ನ ಸಹ ಇಡಬೇಕು. ಕೊನೆಪಕ್ಷ ವಾರದ ಒಂದು ಅವಧಿಯನ್ನ ಕ್ರೀಡೆಗಾಗಿ ಮೀಸಲಿಡಬೇಕು. ಇದರ ಜೊತೆಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲಾತಾಣಗಳನ್ನ ಮಕ್ಕಳು ಬಳಕೆ ಮಾಡದಂತೆ ಎಚ್ಚರಿಕೆವಹಿಸಬೇಕು.