ಠೇವಣಿದಾರರಿಗೆ ವಂಚನೆ ಎಸಗಿದ ಆರೋಪದ ಮೇಲೆ ಗುರು ರಾಘವೇಂದ್ರ ಬ್ಯಾಂಕ್‍ಗೆ ಸೇರಿದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಪಡಿಸಿಕೊಂಡಿದೆ. ಮಂಗಳವಾರ ಜಾರಿ ನಿರ್ದೇಶನಾಲಯವರು 114.19 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದಿದೆ.
2019 ರವರೆಗೂ ತನ್ನ ಠೇವಣಿದಾರರಿಗೆ ಭರಪೂರ ಬಡ್ಡಿದರ ನೀಡಿ ಸೆಳೆಯುತ್ತಿದ್ದ ಗುರು ರಾಘವೇಂದ್ರ ಬ್ಯಾಂಕ್ ಏಕಾಏಕಿ ಠೇವಣಿದಾರರಿಗೆ ಹಣ ಹಿಂದಿರುಗಿಸಲು ನಿರಾಕರಿಸಿತ್ತು. ಈ ಬಗ್ಗೆ ಹನುಂತನಗರ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾಯಿತು. ಇದು ಬಹುಕೋಟಿ ಹಗರಣವಾದ್ದರಿಂದ ಇದನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಕೇಳಿಬಂತು. ಬಳಿಕ ಜಾರಿನಿರ್ದೇಶನಾಲಯ ಪಿಎಂಎಲ್‍ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬ್ಯಾಂಕ್ ಗೆ ಸಂಬಂಧ ಪಟ್ಟ ಆಸ್ತಿಗಳನ್ನು ಕಾನೂನು ರೀತ್ಯಾ ಜಪ್ತಿಮಾಡಲು ಪ್ರಾರಂಭಿಸಿತು. ಈ ಬಗ್ಗೆ ಸದನದಲ್ಲೂ ಸಹ ಚರ್ಚೆಯಾಯ್ತು.
ಸದ್ಯಕ್ಕೆ ಗುರು ರಾಘವೇಂದ್ರ ಬ್ಯಾಂಕ್‍ಗೆ ಸೇರಿದ ಖಾಲಿ ನಿವೇಶನ, ವಾಣಿಜ್ಯ ಕಟ್ಟಡಗಳು ಮತ್ತು ಕೈಗಾರಿಕಾ ಕಟ್ಟಡಗಳನ್ನು ಜಾರಿ ನಿರ್ದೇಶನಾಲಯ ಜಪ್ತಿಪಡಿಸಿಕೊಂಡಿದೆ.