ಟೋಕಿಯೊ: ಉತ್ತರ ಜಪಾನ್‌ನ ಅಮೊರಿಯಲ್ಲಿ ಮಂಗಳವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ. ಆದರೆ ಯಾವುದೇ ಸುನಾಮಿ ಮುನ್ಸೂಚನೆಯನ್ನು ನೀಡಲಾಗಿಲ್ಲ ಎಂದು ವರದಿಯಾಗಿದೆ.
ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಭೂಕಂಪವು ಸಂಜೆ 6:18 ರ ಹೊತ್ತಿಗೆ 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ಅಪ್ಪಳಿಸಿದೆ.
ಜಪಾನಿನ ಯಾವುದೇ ಪ್ರಮುಖ ಮಾಧ್ಯಮಗಳು ಜೀವಹಾನಿ ಅಥವಾ ಗಂಭೀರ ಗಾಯಗಳ ಆಗಿರುವ ಬಗ್ಗೆ ಇದುವರೆಗೂ ವರದಿ ಮಾಡಿಲ್ಲ.
ಭೂಕಂಪದ ತೀವ್ರತೆ 6.2 ಇತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಜಪಾನಿನಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದು, ಭೂಕಂಪನವನ್ನು ತಡೆಯುವ ವಿನ್ಯಾಸದ ಕಟ್ಟಡಗಳನ್ನು ಇಲ್ಲಿ ಹೆಚ್ಚಾಗಿ ನಿರ್ಮಿಸಲಾಗುತ್ತದೆ.