ಹೊಸಪೇಟೆ: ಉತ್ತರ ಕರ್ನಾಟಕ ಭಾಗದಲ್ಲಿ ಭೂಕಂಪನ ಅನುಭವವಾಗಿದೆ. ರಿಕ್ಟರ್ ಮಾಪನದ ಮೂಲಕ ಭೂಕಂಪನ ದಾಖಲಾಗಿದ್ದು, ಹೊಸಪೇಟೆ ತಾಲೂಕಿನ ಡಣಾಪುರ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನವಾಗಿದೆ 15- ರಿಂದ 20 ಕಿಮೀ, ರೇಡಿಯಲ್ ವ್ಯಾಪ್ತಿಯಲ್ಲಿ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನ ತೀವ್ರತೆ ಕಡಿಮೆ ಪ್ರಮಾಣದ್ದಾಗಿದ್ದು, ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಜನರು ಆತಂಕಗೊಳ್ಳಬಾರದೆಂದು ವಿಜಯನಗರ ಜಿಲ್ಲಾಡಳಿತ ಸ್ಥಳೀಯರಲ್ಲಿ ಮನವಿ ಮಾಡಿದೆ