Sunday, July 19, 2026
Homeಟಾಪ್ ನ್ಯೂಸ್D. V. Sadananda Gowda: ಸಿದ್ದರಾಮಯ್ಯ ಕ್ಷಮೆ ಕೇಳಲಿ: ಡಿ.ವಿ ಸದಾನಂದಗೌಡ

D. V. Sadananda Gowda: ಸಿದ್ದರಾಮಯ್ಯ ಕ್ಷಮೆ ಕೇಳಲಿ: ಡಿ.ವಿ ಸದಾನಂದಗೌಡ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾ ಮೂರ್ತಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಆದರೆ ಈ ಬಗ್ಗೆ ಕೆ ಎನ್ ರಾಜಣ್ಣ(K.N.Rajanna) ತಪ್ಪಾಗಿ ಹೇಳಿಕೆ ನೀಡಿದ್ದು ಖಂಡನೀಯ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕು. ಇಲ್ಲವಾದರೇ ರಾಜಣ್ಣ ಮೂಲಕವಾದರು ಕ್ಷಮೆ ಕೇಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ(D.V.Sadananda Gowda) ಅವರು ಆಕ್ರೋಶ ಹೊರಹಾಕಿದರು.

ಇಂದು ಇಲ್ಲಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ‌ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ತುಂಬಾ ದೊಡ್ಡದು. ಅಲ್ಲಿ ಕುಳಿತಿರುವವರು ತಮ್ಮ ಪಕ್ಷದವರು ತಪ್ಪು ಮಾತಾಡಿದ್ದರೇ ಅವರ ಪರವಾಗಿ ತಾವೇ ಕ್ಷಮೆ ಕೇಳಬೇಕು ಅದು ಆ ಸ್ಥಾನಕ್ಕೆ ತರುವಂತ ಗೌರವ. ರಾಜಣ್ಣ ಅವರ ಹೇಳಿಕೆಯನ್ನು ಖಂಡಿಸಿ ಈ ಮಾತುಗಳನ್ನಾಡಿದರು. ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಲಿವೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಾಗಿದೆ. ಇದರಿಂದ ಕಾಂಗ್ರೆಸ್ 3 ಹೋಳಾಗಲಿದೆ. 14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದರು. ಕೋಲಾರದ ಮುಳಬಾಗಿಲಿನಲ್ಲಿ ಹಾಕಿದ ಬ್ಯಾನರ್ ಹಾಗೂ ಫ್ಲೇಕ್ಸ್‌ ಗಳನ್ನು ಹರಿದಿದ್ದು, ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‍‌ ಗಳು ಕೂಡ ಹರಿದುಹೋಗಲಿವೆ ಎಂದು ಸದಾನಂದಗೌಡ (D. V. Sadananda Gowda) ಅವರು ಕಿಡಿಕಾರಿದರು.

ಹೆಚ್ಚಿನ ಸುದ್ದಿ

Change Language »
error: Content is protected !!