ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಿದ್ದು, ಮಾರಾಟವಾಗಬೇಕಿದ್ದ ಅಪಾರ ಪ್ರಮಾಣದ ಫಸಲು ನೀರುಪಾಲಾಗಿದೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ರೈತರ ತಮ್ಮ ಬೆಳೆಯನ್ನು ಮಾರಾಟ ಮಾಡುವುದಕ್ಕೆ ಭತ್ತ, ಶೇಂಗಾ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ತಂದಿದ್ದು, ಎಪಿಎಂಸಿಯ ವರ್ತಕ ಅಂಗಡಿ ಮುಂಭಾಗದಲ್ಲಿ ಹಾಕಿದ್ದರು. ಆದರೆ ಏಕಾಏಕಿಯಾಗಿ ಸುರಿದ ಮಳೆಯಿಂದಾಗಿ, ರೈತರ ಫಸಲು ನೀರಿನ ಪಾಲಾಗಿದೆ.
ಜೋರಾಗಿ ಸುರಿದ ಮಳೆಗೆ ಎಪಿಎಂಸಿಯಲ್ಲಿ ಆವರಣದಲ್ಲಿ ನೀರು ನುಗ್ಗಿ, ಬೆಳೆಯಲ್ಲ ನೀರಿನಲ್ಲಿ ನಿಂತು ಬಿಟ್ಟಿದೆ. ಇದರಿಂದ ನಷ್ಟಕ್ಕೆ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ. ಅಲ್ಲದೇ, ಎಪಿಎಂಸಿಗೆ ರೈತರು ತಮ್ಮ ಬೆಳೆ ಮಾರಾಟ ಮಾಡಲು ಬಂದಾಗ, ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ, ಅಗತ್ಯವಾದ ಸೌಲಭ್ಯ ಒದಗಿಸಬೇಕು. ಆದರೆ ಎಪಿಎಂಸಿ ಆಡಳಿತ ಮಂಡಳಿ ನಿರ್ವಹಣೆ ನಿರ್ಲಕ್ಷ್ಯತನ ಈ ಘಟನೆಯಿಂದ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.