Sunday, January 25, 2026
Homeಕ್ರೈಂBENGALURU: ಕುಡಿದ ಮತ್ತಲ್ಲಿ ರಸ್ತೆ ವಿಭಜಕ ಮೇಲಿಂದ ಕಾರು ಜಂಪ್​​​​​​​​​​​ ಮಾಡಿಸಿದ ಚಾಲಕ- VIDEO

BENGALURU: ಕುಡಿದ ಮತ್ತಲ್ಲಿ ರಸ್ತೆ ವಿಭಜಕ ಮೇಲಿಂದ ಕಾರು ಜಂಪ್​​​​​​​​​​​ ಮಾಡಿಸಿದ ಚಾಲಕ- VIDEO

ಬೆಂಗಳೂರು: ಕುಡಿದ ಮತ್ತಲ್ಲಿ ಕಾರು ಚಾಲಕನೊಬ್ಬ ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿ ಡಿವೈಡರ್‌ ಮೇಲೆ ಹಾರಿ ಹೋಟೆಲ್‌ಗೆ ಗುದ್ದಿದ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದ (Indira Nagar) 18ನೇ ಮುಖ್ಯರಸ್ತೆಯಲ್ಲಿ ನಡೆದಿದೆ.

ಅಪಘಾತದ ವೇಳೆ ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕ–ಯುವತಿಯರ ಗುಂಪು ಹಾಗೂ ಇಬ್ಬರು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

View this post on Instagram

 

A post shared by navasamaja (@navasamaja)

ಘಟನೆಯ ವೇಳೆ ಹೋಟೆಲ್‌ನಲ್ಲಿ ಊಟ ಮುಗಿಸಿ ಆರು ಮಂದಿ ಹೊರಗಡೆ ನಿಂತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್‌ಗೆ ಗುದ್ದಿದೆ. ಅಲ್ಲೇ ಇದ್ದ ಯುವಕ ಯುವತಿಯರ ಗುಂಪು ಘಟನೆಯಿಂದ ಪಾರಾಗಿದ್ದಾರೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಬೈಕ್ ಸವಾರರು ಕೂಡ ಕಾರಿನ ಹೊಡೆತಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾದರೂ, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪವೂ ಅಂತರ ಕಡಿಮೆಯಾಗಿದ್ದರೆ, ರಸ್ತೆ ಬದಿಯಲ್ಲಿ ನಿಂತಿದ್ದ ಆರು ಮಂದಿ ಹಾಗೂ ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ.

ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಸಾವಿರ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ – ಮನನೊಂದು ಮಹಿಳೆ ಆತ್ಮಹ*ತ್ಯೆ.!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷುಲಕ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸುಮಾ (30) ಎಂದು ಗುರುತಿಸಲಾಗಿದೆ. ಸ್ವಸಹಾಯ ಸಂಘದ ಕಂತು ಪಾವತಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪತಿ ಚಂದ್ರಶೇಖರ್ ಅವರು ತಮ್ಮ ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿರುವುದು ದಂಪತಿಗಳ ನಡುವೆ ಸಣ್ಣ ಗಲಾಟೆಯಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವಿಚಾರವಾಗಿ ಶುಕ್ರವಾರ ಬೆಳಿಗ್ಗೆ ಕೂಡ ಮೃತ ಸುಮಾ ಮತ್ತು ಚಂದ್ರಶೇಖರ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಲಾಟೆಯ ವೇಳೆ ಸಿಟ್ಟಿನಲ್ಲಿ ಪತಿ ಒಂದೆರಡು ಮಾತು ಬೈದಿದ್ದಾನೆ.

ಇದಾಗಿ ಕೆಲ ಹೊತ್ತಿನ ಬಳಿಕ ಪತಿ ಹಾಗೂ ಅತ್ತೆ ಕೆಲಸಕ್ಕೆಂದು ತೆರಳಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ಸುಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ಚಂದ್ರಶೇಖರ್ ಅವರೊಂದಿಗೆ ಸುಮಾ ವಿವಾಹವಾಗಿದ್ದರು.

ಎಂದಿನಂತೆ ಪತಿ ಊಟಕ್ಕೆಂದು ಮನೆಗೆ ಮರಳಿದಾಗ ಸುಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ನಿಖರ ಕಾರಣಗಳು ಹಾಗೂ ಹಿನ್ನೆಲೆಯನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು, ಡಿಕೆಶಿ ಭರವಸೆ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!