ಬೆಂಗಳೂರು: ದಕ್ಷಿಣ ವಿಭಾಗದ ಜಯನಗರ ಮತ್ತು ವಿವಿಪುರಂ ಠಾಣೆಯ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಬರೋಬ್ಬರಿ 8.20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಐವರನ್ನು ಬಂಧಿಸಲಾಗಿದೆ. ಡ್ರಗ್ಸ್ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳೆಲ್ಲರೂ ವಿದೇಶಿಯರಾಗಿದ್ದಾರೆ.
ಲಾರೆನ್ಸ್, ಚುಕ್ವೂನೇಮ್, ಹಸ್ಲೆ, ಫ್ರಾಂಕ್ ಜಾಗೋ ಮತ್ತು ಇಮ್ಯಾನ್ಯುಲ್ ನಾಝಿ ಬಂಧಿತ ಆರೋಪಿಗಳು. ವಿವಿಪುರ ಮೆಟ್ರೋ ಸ್ಟೇಷನ್ ಬಳಿ ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಹಠಾತ್ ದಾಳಿ ನಡೆಸಿದ್ದರು. ಬಂಧಿತರಿಂದ ವೈಟ್ ಎಂಡಿಎಂಎ, ಬ್ರೌನ್ ಎಂಡಿಎಂಎ, ಹಾಗೂ 300 ಗ್ರಾಂ ಕೊಕೇನ್ ಸೇರಿದಂತೆ ಬಹುಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಗೆ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ಪೂರೈಸುತ್ತಿದ್ದವರು ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.