ಜಾತಿ, ಭಾಷೆ ರಾಜಕೀಯಕ್ಕೆ ಬೆಂಗಳೂರನ್ನು ಹಾಳು ಮಾಡಬೇಡಿ ಎಂದು ಸಚಿವ ಮುನಿರತ್ನ ಡಿಕೆ ಸುರೇಶ್‌ಗೆ ಉತ್ತರಿಸಿದ್ದಾರೆ.
ತಮಿಳರನ್ನು ಕನ್ನಡಿಗರ ಮೇಲೆ, ಒಕ್ಕಲಿಗರ ಮೇಲೆ ಮುನಿರತ್ನ ಎತ್ತಿಕಟ್ಟುತ್ತಿದ್ದಾರೆಂಬ ಡಿಕೆ ಸುರೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ಈಗ ನನ್ನ ವಿರುದ್ದ ಪಿತೂರಿ ಮಾಡಿ ಬಾಷೆ, ಜಾತಿ ವಿಷಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ವಿದ್ಯಾಭ್ಯಾಸ ಮಾಡಿರುವುದು ಕನ್ನಡ ಮಾಧ್ಯಮದಲ್ಲಿ, ಇಲ್ಲಿ ನಾವು, ಒಕ್ಕಲಿಗರು ಎಲ್ಲಾ ಅಣ್ತಮ್ಮಂದಿರಂತೆ ಬಾಳ್ತಿದ್ದೇವೆ ಎಂದಿದ್ದಾರೆ.
ಡಿ.ಕೆ.ಸುರೇಶ್ ರನ್ನು ಏಳು ವರ್ಷಗಳಿಂದ ಬಲ್ಲೆ. ಅವರ ಚುನಾವಣೆಯಲ್ಲಿ ಡಿ.ಕೆ ತಮಿಳು,ತೆಲುಗು, ಮಾಲಯಳಂ ಭಾಷೆಯಲ್ಲಿ ಮಾತನಾಡಿ ಎಂದು ಹೇಳುತ್ತಿದ್ದರು. ಕನ್ನಡ ನಾಡಿನಿಂದ ಹಲವಾರು ನಟರು ಹೊರ ರಾಜ್ಯದಲ್ಲಿ ಸೂಪರ್ ಸ್ಟಾರ್ ಗಳಾಗಿದ್ದಾರೆ. ನಾನು ಉಸಿರು, ನನ್ನ ಜೀವನ ಇಲ್ಲೆ. ಅನ್ಯ ಭಾಷಿಕ ಮಕ್ಕಳಿಗೆ ಕನ್ನಡ ಭಾಷೆ ಕಲಿಯುವಂತೆ ನಾನು ಹೇಳುತ್ತಿದ್ದೇನೆ. ನಾವು ಐದು ತಲೆ ಮಾರುಗಳಿಂದ ಮಲ್ಲೇಶ್ವರಂ ನಿವಾಸಿಯಾಗಿದ್ದೇವೆ ಎಂದು ಮುನಿರತ್ನ ಹೇಳಿದ್ದಾರೆ.
ಆರ್‌ಆರ್ ನಗರದಲ್ಲಿ ಪ್ರಚಾರದ ವೇಳೆ, ಯಾರೇ ಬಂದರೂ ಅಟ್ಟಾಡಿಸಿ ಹೊಡೆಯಿರಿ, ಮುಂದಿನದ್ದು ನಾನು ನೋಡಿಕೊಳ್ಳುತ್ತೇನೆ ಎಂದು ಮುನಿರತ್ನ ಅವರು ತಮಿಳು ಭಾಷೆಯಲ್ಲಿ ಕರೆ ನೀಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಡಿಕೆ ಸುರೇಶ್ ಮುನಿರತ್ನ ವಿರುದ್ಧ ಗಂಭೀರ ಆರೋಪಗಳನ್ನು ಎತ್ತಿದ್ದರು.