ಬೆಂಗಳೂರು: ಬಂಡೀಪುರದ ಹುಲಿ ಸಂರಕ್ಷಿತ ಯೋಜನೆಯ 50ನೇ ವರ್ಷದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ.
ಆದರೆ ಈ ನಡುವೆ ಕಾಂಗ್ರೆಸ್ ಪ್ರಧಾನ ನರೇಂದ್ರ ಮೋದಿಯವರನ್ನು ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಪ್ರಧಾನಿ ಮೋದಿಯವರೇ ನೀವು ಇಂದು ಸಫಾರಿ ಹೋಗುತ್ತಿರುವ ಬಂಡೀಪುರ ಸಂರಕ್ಷಿತ ಯೋಜನೆಯನ್ನು 1973ರಲ್ಲಿ ಆರಂಭಿಸಿದ್ದು ಕಾಂಗ್ರೆಸ್. ಇವತ್ತು ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆ. ಆದರೆ ನಿಮ್ಮಲ್ಲಿ ನಮ್ಮ ಒಂದು ವಿನಂತಿ ಏನೆಂದರೆ ದಯವಿಟ್ಟು ಬಂಡಿಪುರ ಸಂರಕ್ಷಿತ ಅರಣ್ಯವನ್ನು ಅದಾನಿಗೆ ಮಾರಬೇಡಿ” ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ , ” ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ….!! ಇನ್ನು ಕೆಲವೇ ದಿನಗಳಲ್ಲಿ #SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ @narendramodi ಜೀ” ಎಂದು ಟ್ವೀಟ್ ಮಾಡಿದ್ದಾರೆ.
“ಬಂಡೀಪುರದಲ್ಲಿ 50 ವರ್ಷಗಳ ಹಿಂದೆ ಉದ್ಘಾಟನೆಯಾಗಿದ್ದ ಬಂಡೀಪುರ ರಿಸರ್ವ್ ಯೋಜನೆಯ ಸಂಪೂರ್ಣ ಕ್ರೆಡಿಟ್ ಅನ್ನು ಇವತ್ತು ಪ್ರಧಾನಿ ಮೋದಿ ಪಡೆದುಕೊಳ್ಳಲಿದ್ದಾರೆ. ಹೆಡ್ ಲೈನ್ ಗಳಲ್ಲಿ ಅವರ ಬಗ್ಗೆ ಸುದ್ದಿಗಳು ಬರಬಹುದು. ಆದರೆ ವಾಸ್ತವಾಂಶ ಬೇರೆಯೇ ಇದೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.